ಸೊರಬ : ವಿಜಯ ಸೇವಾ ಟ್ರಸ್ಟ್ (ರಿ.), ಯಕ್ಷಶ್ರೀ ಸಾಗರ ಮತ್ತು ವಿನಾಯಕ ಕಲ್ಯಾಣ ಮಂದಿರ ವಿಶ್ವಸ್ಥ ಸಮಿತಿ ಕೋಡನಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷ ಗಾಯನ ವೈವಿಧ್ಯ’ ಯಕ್ಷಗಾನ ಹಿಮ್ಮೇಳ ಕಾರ್ಯಕ್ರಮವನ್ನು ದಿನಾಂಕ 29 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಸೊರಬ ತಾಲೂಕಿನ ಕೋಡನಕಟ್ಟೆಯಲ್ಲಿರುವ ವಿನಾಯಕ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಮಕೃಷ್ಣ ಹೆಗಡೆ ಹಿಲ್ಲೂರು, ಸೃಜನ್ ಗಣೇಶ್ ಹೆಗಡೆ ಗುಂಡೂಮನೆ, ಅನಿರುದ್ಧ ಹೆಗಡೆ ವರ್ಗಾಸರ ಮತ್ತು ಗಣೇಶ್ ಗಾಂವಕರ್ ಇವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಡಾ. ಎಚ್.ಎಸ್. ಮೋಹನ್ ಹೊಸಬಾಳೆ ಇವರು ಕಾರ್ಯಕ್ರಮ ಸಂಯೋಜನೆ ಮತ್ತು ನಿರೂಪಣೆ ಮಾಡಲಿದ್ದಾರೆ.