ಮುಂಬಯಿ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಪ್ರಸ್ತುತಿಯಲ್ಲಿ ತ್ರಿರಂಗ ಸಂಗಮ ಮುಂಬಯಿ ಸಂಚಾಲಕತ್ವದಲ್ಲಿ ಮುಂಬಯಿ ಮಹಾನಗರದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮ ‘ಯಕ್ಷ ಜ್ಞಾನ ಯಾನ’ವನ್ನು ದಿನಾಂಕ 19 ಆಗಸ್ಟ್ 2024ರಿಂದ 22 ಆಗಸ್ಟ್ 2024ರವರೆಗೆ ಮುಂಬಯಿಯಲ್ಲಿ ಆಯೋಜಿಸಲಾಗಿದೆ.
ದಿನಾಂಕ 19 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮುಂಬಯಿಯ ಥಾಣೆ (ಪಶ್ಚಿಮ), ಚೆಕ್ ನಾಕಾ ಬಳಿ, ಗೋಪಾಲಾಶ್ರಮದ ಹತ್ತಿರ, ಆರ್ ನೆಸ್ಟ್ ಬ್ಯಾಂಕ್ವೆಟ್ ಹೊಟೇಲಿನಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ವೀರಮಣಿ ಕಾಳಗ’, ದಿನಾಂಕ 20 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮುಂಬಯಿಯ ದತ್ತಾನಿ ಮಾಲ್ 3ನೇ ಮಹಡಿ, ಆರ್ನ ಸ್ವರ್ಣ ಬ್ಯಾಂಕ್ವೆಟ್ ಹಾಲ್ ಇಲ್ಲಿ ಕವಿ ಮೂಲ್ಕಿ ರಾಮಕೃಷ್ಣಯ್ಯ ವಿರಚಿತ ‘ಸುಧನ್ವ ಮೋಕ್ಷ’, ದಿನಾಂಕ 21 ಆಗಸ್ಟ್ 2024ರಂದು ಸಂಜೆ 3-30 ಗಂಟೆಗೆ ಮುಂಬಯಿ ಪಶ್ಚಿಮ, ಬೊರಿವಲಿ, ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮಾರ್ಜುನ’ ಮತ್ತು ದಿನಾಂಕ 22 ಆಗಸ್ಟ್ 2024ರಂದು ಸಂಜೆ 4-30 ಗಂಟೆಗೆ ಮುಂಬಯಿಯ (ಪೂರ್ವ), ಬಂಟರ ಸಂಘ ಮುಂಬಯಿ ಇಲ್ಲಿ ಕವಿ ದೇವಿದಾಸ ವಿರಚಿತ ‘ಶ್ರೀ ಕೃಷ್ಣ ಸಂಧಾನ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ನಡೆಯಲಿದೆ.
ಹಿಮ್ಮೇಳದಲ್ಲಿ ಕುಮಾರಿ ಶ್ರೀರಕ್ಷಾ ಹೆಗಡೆ ಸಿದ್ಧಾಪುರ, ಶ್ರೀ ಎನ್.ಜಿ. ಹೆಗಡೆ ಯಲ್ಲಾಪುರ ಮತ್ತು ಶ್ರೀ ಶ್ರೀಕಾಂತ್ ಶೆಟ್ಟಿ ಎಡಮೊಗೆ ಹಾಗೂ ಮುಮ್ಮೇಳದಲ್ಲಿ ವಿದ್ವಾನ್ ಉಮಾಕಾಂತ್ ಭಟ್, ಶ್ರೀ ವಾಸುದೇವ್ ರಂಗ ಭಟ್, ಶ್ರೀ ಅಜಿತ್ ಕಾರಂತ, ಶ್ರೀ ಅಶೋಕ್ ಪಕ್ಕಳ ಮತ್ತು ಶ್ರೀ ಶಂಕರ್ ಆಳ್ವ ಕರ್ನೂರು ಇವರುಗಳು ಸಹಕರಿಸಲಿರುವರು.