ಬೈಂದೂರು : ಲಾವಣ್ಯ (ರಿ.) ಬೈಂದೂರು ಹಾಗೂ ಶ್ರೀ ಜಗದೀಶ್ ಮಯ್ಯ ಬಿಜೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷ ಲಾವಣ್ಯ 2024’ವು ಶ್ರೀ ಶಾರದಾ ವೇದಿಕೆಯಲ್ಲಿ ದಿನಾಂಕ 30-03-2024 ಮತ್ತು 31-03-2024ರಂದು ನಡೆಯಲಿದೆ.
ದಿನಾಂಕ 30-03-2024ರಂದು ಸಂಜೆ ಗಂಟೆ 5.00ಕ್ಕೆ ಯಕ್ಷ ದಿಗ್ಗಜರಿಂದ ನಡೆಯಲಿರುವ ‘ಭ್ರಗು ಶಾಪ’ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ ಶಂಕರ ನಾರಾಯಣ, ರಾಘವೇಂದ್ರ ಹೆಗಡೆ ಯಲ್ಲಾಪುರ ಮತ್ತು ಜನಾರ್ದನ ಆಚಾರ್ಯ ಹಳ್ಳಾಡಿ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ್ ಭಟ್, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣಕೆರೆ, ವೈಕುಂಠ ಹೇರ್ಳೆ ಮತ್ತು ಸತೀಶ್ ಶೆಟ್ಟಿ ಮೂಡುಬಗೆ ಇವರುಗಳು ಭಾಗವಹಿಸಲಿರುವರು.
ದಿನಾಂಕ 31-03-2024ರಂದು ಸಂಜೆ ಗಂಟೆ 6.00ಕ್ಕೆ ಲಾವಣ್ಯದ ಮಹಿಳಾ ಯಕ್ಷಗಾನ ಬಳಗದವರಿಂದ ಗಣೇಶ ದೇವಾಡಿಗ ಉಪ್ಪುಂದ ಇವರ ಸಂಯೋಜನೆ ಮತ್ತು ನಿರ್ದೇಶನದಲ್ಲಿ ‘ರಾಣಿ ಶಶಿಪ್ರಭೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.