ಬೆಂಗಳೂರು : ನಾಗರಾಜ್ ಶೆಟ್ಟಿ ನೈಕಾಂಬ್ಳಿ ಸಂಯೋಜನೆಯಲ್ಲಿ ಆಯೋಜಿಸುವ ಹತ್ತು ಮೇಳಗಳ ಕಲಾವಿದರು ಮತ್ತು ಅತಿಥಿ ಕಲಾವಿದರ ಸಮಾಗಮದಲ್ಲಿ ‘ಯಕ್ಷ ಸಂಕ್ರಾಂತಿ’ ಕಾರ್ಯಕ್ರಮವು 21 ಸೆಪ್ಟೆಂಬರ್ 2024ರ ಶನಿವಾರದಂದು ರಾತ್ರಿ ಘಂಟೆ 9.00 ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ನಾಡಿನ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಕವಿ ದೇವಿದಾಸ ವಿರಚಿತ ‘ಕೃಷ್ಣ ಸಂದಾನ’, ಕವಿ ಮೂಲಿಕೆ ರಾಮಕೃಷ್ಣ ವಿರಚಿತ ‘ಸುಧನ್ವ’, ಕವಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಧರ್ಮಾಂಗದ’ ಹಾಗೂ ಕವಿ ರತ್ನಾಪುರದ ರಾಮ ವಿರಚಿತ ‘ತಾಮ್ರ ಧ್ವಜ’ ಪ್ರಸಂಗಳು ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಂದ್ರಕಾಂತ ರಾವ್ ಮೂಡುಬೆಳ್ಳೆ, ಉದಯ್ ಕುಮಾರ್ ಹೊಸಾಳ್, ಸೃಜನ್ ಗಣೇಶ ಹೆಗಡೆ, ಶ್ರೀನಿವಾಸ ಪ್ರಭು, ಅಕ್ಷಯ್ ಆಚಾರ್ಯ, ಶಶಾಂಕ್ ಆಚಾರ್ಯ ಹಾಗೂ ಪ್ರಜ್ವಲ್ ಮುಂಡಾಡಿ ಸಹಕರಿಸಲಿದ್ದಾರೆ.
‘ಕೃಷ್ಣ ಸಂದಾನ’ ಪ್ರಸಂಗದಲ್ಲಿ ಕೌರವನಾಗಿ ಕೃಷ್ಣ ಯಾಜಿ ಬಳ್ಕೂರು, ಕೃಷ್ಣನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ವಿದುರನಾಗಿ ರಮೇಶ್ ಭಂಡಾರಿ, ದೂತನಾಗಿ ದ್ವಿತೇಶ್ ಕಾಮತ್, ಕರ್ಣನಾಗಿ ಪ್ರಶಾಂತ ಹೆಗಡೆ, ದುಶ್ಯಾಸನನಾಗಿ ಮಂಜುನಾಥ್ ಹವ್ಯಕ ಪಾತ್ರ ನಿರ್ವಹಿಸಲಿದ್ದು, ‘ಸುಧನ್ವ’ ಪ್ರಸಂಗದಲ್ಲಿ ಅರ್ಜುನನಾಗಿ ವಿದ್ಯಾಧರ್ ಜಲವಳ್ಳಿ, ಸುಧನ್ವನಾಗಿ ವಿಶ್ವನಾಥ್ ಹೆನ್ನಾಬೈಲ್ ಹಾಗೂ ಕೃಷ್ಣನಾಗಿ ರವಿ ಶೆಟ್ಟಿ ವಾಟಾರ್ ಪಾತ್ರ ನಿರ್ವಹಿಸಲಿದ್ದಾರೆ,
‘ಧರ್ಮಾಂಗದ’ ಪ್ರಸಂಗದಲ್ಲಿ ಭರತನಾಗಿ ಗಣಪತಿ ಹೆಗಡೆ ತೋಟಿಮನೆ, ಧರ್ಮಾಂಗಧನಾಗಿ ಉದಯ ಹೆಗಡೆ ಕಡಬಾಳ್, ಬಲಿ ಪಾತ್ರದಲ್ಲಿ ನವೀನ್ ಶೆಟ್ಟಿ ಐರ್ಬೈಲ್ ಹಾಗೂ ದೂತನಾಗಿ ದ್ವಿತೇಶ್ ಕಾಮತ್ ಪಾತ್ರ ನಿರ್ವಹಿಸಲಿದ್ದು, ‘ತಾಮ್ರ ಧ್ವಜ’ ಪ್ರಸಂಗದಲ್ಲಿ ತಾಮ್ರಧ್ವಜನಾಗಿ ಆಜ್ರಿ ಗೋಪಾಲ ಗಾಣಿಗ, ಅರ್ಜುನನಾಗಿ ಐರ್ಬೈಲ್ ಆನಂದ ಶೆಟ್ಟಿ, ಕೃಷ್ಣನಾಗಿ ಕೋಟ ಸುರೇಶ್ ಬಂಗೇರ, ಮಯೂರಧ್ವಜನಾಗಿ ಸುನಿಲ್ ಹೊಲಾಡು, ಕುಮುದ್ವತಿಯಾಗಿ ಮಾಧವ ನಾಗೂರು, ಬ್ರಾಹ್ಮಣನಾಗಿ ಸತೀಶ್ ಹಾಲಾಡಿ, ವೃಷಕೇತುವಿನ ಪಾತ್ರದಲ್ಲಿ ಉಳ್ಳೂರು ನಾರಾಯಣ, ನಕುಲಧ್ವಜನಾಗಿ ಪ್ರಶಾಂತ್ ವರ್ಧನ ಹಾಗೂ ಪ್ರದ್ಯುಮ್ನನಾಗಿ ಮಂಜು ಹವ್ಯಕ ರಂಜಿಸಲಿದ್ದಾರೆ.
ಮುಂಗಡ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ – 974147 74255 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

