ಬೆಂಗಳೂರು : ಯಕ್ಷ ಸಂಭ್ರಮ (ರಿ.) ಹುಳಿಮಾವು ಬೆಂಗಳೂರು ಇವರ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ‘ಯಕ್ಷ ಸಪ್ತಕ’ ಯಕ್ಷಗಾನ ಆಖ್ಯಾನಗಳು ದಿನಾಂಕ 01, 02, 08 ಮತ್ತು 09 ಮಾರ್ಚ್ 2025ರಂದು ಬೆಂಗಳೂರಿನ ಹುಳಿಮಾವು ಶ್ರೀ ಕ್ಷೇತ್ರ ಭಗವತಿ ದೇವಸ್ಥಾನದಲ್ಲಿ ಪ್ರದರ್ಶನಗೊಳ್ಳಲಿವೆ.
ದಿನಾಂಕ 01 ಮಾರ್ಚ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಹುಳಿಮಾವು ಘಟಕದ ಮಕ್ಕಳಿಂದ ‘ಶ್ರೀಕೃಷ್ಣ ಲೀಲೆ – ಕಂಸವಧೆ’ ಮತ್ತು ಸಂಜೆ 6-00 ಗಂಟೆಗೆ ಹೆಬ್ಬಾಳ ಘಟಕದ ಕಲಾವಿದರಿಂದ ‘ಶರಸೇತು ಬಂಧನ’, ದಿನಾಂಕ 02 ಮಾರ್ಚ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಮಹಿಳಾ ತಂಡದಿಂದ ‘ಭಸ್ಮಾಸುರ ಮೋಹಿನಿ’ ಮತ್ತು ಸಂಜೆ 6-00 ಗಂಟೆಗೆ ಚಂದಾಪುರ ಘಟಕದ ಕಲಾವಿದರಿಂದ ‘ಶ್ರೀದೇವಿ ಮಹಾತ್ಮೆ’, ದಿನಾಂಕ 08 ಮಾರ್ಚ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಕೆಂಗೇರಿ ಘಟಕದ ಕಲಾವಿದರಿಂದ ‘ಚೂಡಾಮಣಿ’ ಮತ್ತು ಸಂಜೆ 6-00 ಗಂಟೆಗೆ ಮಹಿಳಾ ತಂಡದಿಂದ ‘ಶಶಿಪ್ರಭಾ ಪರಿಣಯ’ ಹಾಗೂ ದಿನಾಂಕ 09 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಹುಳಿಮಾವು ಘಟಕದ ಕಲಾವಿದರಿಂದ ‘ಶ್ರೀದುರ್ಗಾ ಸಾನ್ನಿಧ್ಯ’ ಎಂಬ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.