ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಸಂಸ್ಥೆಯ ಐವತ್ತರ ಸಂಭ್ರಮದ ಹಬ್ಬ ‘ಯಕ್ಷ ಸಪ್ತೋತ್ಸವ’ ಕಾರ್ಯಕ್ರಮವು ದಿನಾಂಕ 01-01-2024ರ ಸೋಮವಾರದಿಂದ 07-01-2024 ಆದಿತ್ಯವಾರದವರೆಗೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ.
ದಿನಾಂಕ 01-01-2024ರ ಸೋಮವಾರ ‘ಪುತ್ರಕಾಮೇಷ್ಟಿ’, 02-01-2024ರ ಮಂಗಳವಾರ ‘ಸೀತಾ ಕಲ್ಯಾಣ’ – ‘ಪರಶುರಾಮ ಗರ್ವಭಂಗ’, 03-01-2024ರ ಬುಧವಾರ ‘ಪಟ್ಟಾಭಿಷೇಕ ಭಂಗ’, 04-01-2024ರ ಗುರುವಾರ ‘ಸೀತಾಪಹಾರ’, 05-01-2024ರ ಶುಕ್ರವಾರ ‘ವಿಭೀಷಣ ನೀತಿ’ – ‘ಕೈಕಸಾ ನೀತಿ’, 06.01.2024ರ ಶನಿವಾರ ‘ರಾವಣ ವಧೆ’ ಹಾಗೂ ದಿನಾಂಕ 07-01-2024ರ ಆದಿತ್ಯವಾರ ದೊಂದಿ ಬೆಳಕಿನಲ್ಲಿ ‘ಅಗ್ನಿ ಪರೀಕ್ಷೆ’ – ‘ರಾಮಪಟ್ಟಾಭೀಷೇಕ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಕಲಾವಿದರುಗಳಾಗಿ ಸರ್ವಶ್ರೀಗಳಾದ ರಾಘವೇಂದ್ರ ಮಯ್ಯ ಹಾಲಾಡಿ, ಜನ್ಸಾಲೆ ರಾಘವೇಂದ್ರ ಆಚಾರ್, ಸುರೇಶ್ ಶೆಟ್ಟಿ ಶಂಕರನಾರಾಯಣ, ಪ್ರಸನ್ನ ಭಟ್ ಭಾಲ್ಕಲ್, ಪರಮೇಶ್ವರ ನ್ಯಾಕ್ ಕಾನ್‌ಗೋಡು, ಲಂಬೋದರ ಹೆಗಡೆ ನಿಟ್ಟೂರು, ಉದಯ ಕುಮಾರ ಹೊಸಾಳ, ಸುನಿಲ್ ಭಂಢಾರಿ ಕಡತೋಕ, ಬೋಳೆರೆ ಗಜಾನನ ಭಂಡಾರಿ, ಎನ್.ಜಿ.ಹೆಗೆಡೆ, ರಾಘವೇಂದ್ರ ಹೆಗಡೆ, ಶಶಿ ಆಚಾರ್, ಲೋಹಿತ್ ಕೊಮೆ, ಭರತ್ ಚಂದನ್, ಮಂದಾರ್ತಿ ರಾಮಕೃಷ್ಣ, ರಾಕೇಶ್ ಮಲ್ಯ, ಕೋಟ ಶಿವಾನಂದ, ಕೆ.ಜೆ.ಕೃಷ್ಣ, ಮಂಜುನಾಥ ನಾವಡ ಕಟ್ಗೇರಿ, ಸುಜನ್ ಹಾಲಾಡಿ, ವಾಗ್ವಿಲಾಸ್.ಪಿ. ಭಟ್, ಸ್ಕಂದ ಹೆಬ್ಬಾರ್, ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಮೋಹನ ಹೆಗಡೆ, ಮೂರುರು ಸುಬ್ರಹ್ಮಣ್ಯ ಹೆಗಡೆ, ಅಂಬರೀಷ ಭಟ್ಟ, ವೈಕುಂಠ ಹೇರ್ಳೆ, ಕಾಸರಕೋಡು ಶ್ರೀಧರ ಭಟ್ಟ, ಆದಿತ್ಯ ಹೆಗಡೆ, ಮಂಜುನಾಥ ಹಿಲ್ಲೂರು, ನಾಗೇಶ್ ಕುಳಿಮನೆ, ಅಶೋಕ ಆಚಾರ್ ಸಾಯಿಬ್ರಕಟ್ಟೆ, ಸೀತರಾಮ ಸೋಮಯಾಜಿ, ಬೇಳಂಜೆ ಸತೀಶ ನಾಯಕ್, ಪ್ರಶಾಂತ ಮಯ್ಯ, ಶೋಭಿತ್, ಸೃಜನ್, ರೋಹನ್, ವಿಭವನ್, ಸಚ್ಚಿದಾನಂದ ಹಾಗೂ ಗಗನ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಪ್ರತೀ ದಿನ ಸಂಜೆ ಘಂಟೆ 5.00ಕ್ಕೆ ಪ್ರಾರಂಭವಾಗಲಿದ್ದು, ಪ್ರಸಂಗ ಪ್ರರ್ದಶನದ ಪೂರ್ವದಲ್ಲಿ ಕಲಾಕೇಂದ್ರದ ಗುರು ಶ್ರೀ ಗಣೇಶ ಚೇರ್ಕಾಡಿ ನಿರ್ದೇಶನದಲ್ಲಿ ಕಲಾಕೇಂದ್ರದ ಬಾಲ ಕಲಾವಿದರಿಂದ ಪೂರ್ವರಂಗದ ಬಾಲಗೋಪಾಲ ಹಾಗೂ ಪೀಠೀಕಾ ಶ್ರೀವೇಷ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಪ್ರತಿ ದಿನ 30 ನಿಮಿಷಗಳ ನೃತ್ಯ ಸಿಂಚನ, ಯಕ್ಷ ಸಿಂಚನ (ಹೋವಿನಕೋಲು) ಸ್ವರನಾದ ಸಿಂಚನಗಳು ನಡೆಯಲಿವೆ.