ಬ್ರಹ್ಮಾವರ : ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು 27 ಜುಲೈ2024ರಂದು ನಡೆಯಿತು.
ತರಗತಿಯನ್ನು ಉದ್ಘಾಟಿಸಿದ ಪ್ರಸಾಧನ ತಜ್ಞರಾದ ಕೃಷ್ಣಮೂರ್ತಿ ಮಾತನಾಡಿ “ಯಕ್ಷಗಾನ ಕಲಿಕೆಯಿಂದ ಶಿಸ್ತು, ಆತ್ಮವಿಶ್ವಾಸ ಮಾತ್ರವಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳು ಸದೃಢರಾಗುತ್ತಾರೆ.” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಇದರ ಸದಸ್ಯರಾದ ಗಣೇಶ್ ಬ್ರಹ್ಮಾವರ, ಶಾಲಾ ಹಳೆ ವಿದ್ಯಾರ್ಥಿ ಸಾಗರ್ ಜೋಗಿ, ಗುರುಗಳಾದ ಮಂಜುನಾಥ್ ಐರೋಡಿ, ಶಾಲಾ ಪ್ರಾಂಶುಪಾಲರಾದ ವಂದನೀಯ ಸಿಸ್ಟರ್ ಕನುಕಾ, ಯಕ್ಷಗಾನ ಉಸ್ತುವಾರಿ ಶಿಕ್ಷಕಿ ಅನುರಾಧ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿ ಪ್ರಗತಿ ನಿರೂಪಿಸಿ, ಮಾನ್ವಿ ವಂದನಾರ್ಪಣೆಗೈದರು.




