ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ನಡೆಸುವ ಯಕ್ಷ ಶಿಕ್ಷಣ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನದ ಅಂಗವಾಗಿ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರೌಢ ಶಾಲಾ ವಿಭಾಗದಲ್ಲಿ ದಿನಾಂಕ 21-06-2024ರಂದು ಚಾಲನೆಗೊಂಡಿತು.
ಪುಂಜಾಲಕಟ್ಟೆ ಘಟಕ ಅಧ್ಯಕ್ಷರಾದ ಯಶೋಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಘಟಕದ ಗೌರವ ಮಾರ್ಗದರ್ಶಿ ಜಯಂತ್ ಶೆಟ್ಟಿಯವರು ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಂ ಪ್ರಸಾದ್ ಸಂಪಿಗೆತ್ತಾಯ, ಘಟಕದ ಯಕ್ಷಗುರು ದಿನೇಶ್ ಶೆಟ್ಟಿ ಕಾವಳಕಟ್ಟೆ, ಯಕ್ಷಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ, ಸಾಯಿಸುಮಾ ನಾವಡ, ದಿವಾಕರ ದಾಸ್ ಕಾವಳಕಟ್ಟೆ, ಘಟಕ ಮಹಿಳಾ ಸಮಿತಿ ಪ್ರಮುಖರಾದ ಲಕ್ಷ್ಮೀ ಸಂಜೀವ ಶೆಟ್ಟಿ, ಉಮಾ ಡಿ. ಗೌಡ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಂಜಪ್ಪ, ಜಯರಾಮ ಶೆಟ್ಟಿ, ಕಿಶೋರ್ ಶೆಟ್ಟಿ, ಘಟಕ ಪ್ರಮುಖರಾದ ಪುರುಷೋತ್ತಮ ಪೂಜಾರಿ ಬೊಳೆಕ್ಕಿನಕೋಡಿ, ರಮೇಶ್ ಶೆಟ್ಟಿ ಮಜಲೋಡಿ, ಪ್ರಭಾಕರ ಪಿ.ಎಂ., ಉದಯ ಕುಮಾರ್ ಶೆಟ್ಟಿ, ಯೋಗೀಶ್, ವಿನೋದ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕುಮಂಗಿಲ, ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಉಪ ಪ್ರಾಂಶುಪಾಲರಾದ ಬಿ. ಉದಯ ಕುಮಾರ್ ಜೈನ್ ಸ್ವಾಗತಿಸಿ, ಪ್ರಸ್ತಾವಿಸಿದರು. ರತ್ನದೇವ್ ಪುಂಜಾಲಕಟ್ಟೆ ವಂದಿಸಿ, ಶಿಕ್ಷಕ ನಿರಂಜನ್ ಜೈನ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ರಾಜೇಶ್ ಸಹಕರಿಸಿದರು. ನಾಟ್ಯಗುರು ಶ್ರೀವತ್ಸ ಸೋಮಯಾಜಿ ಯಕ್ಷಗಾನ ನಾಟ್ಯ ತರಬೇತಿ ನಡೆಸಿಕೊಟ್ಟರು.