ಮಂಗಳೂರು : ದಿ. ಲಕ್ಮೀನಾರಾಯಣ ಅಲೆವೂರಾಯರು ವರ್ಕಾಡಿಯಂತಹಾ ಕುಗ್ರಾಮದಲ್ಲೂ ಯಕ್ಷಗಾನದ ಕಂಪನ್ನು ಪಸರಿಸಿದ ಎಲೆಮರೆಯ ಕಾಯಿಯಂತೆ ಇದ್ದು ಇತಿಹಾಸ ಸೇರಿದವರು. ಹಿಂದಿ ಭಾಷಾ ಪಂಡಿತರಾಗಿದ್ದು ಕನ್ನಡದ ಮೇಲೆ ಪ್ರಭುತ್ವವನ್ನು ಹೊಂದಿದ್ದು, ಅನೇಕ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದ್ದಾರೆ. ತಮ್ಮ ಪ್ರಬುದ್ಧ ಜಾಣ್ಮೆಯಿಂದ ಯಕ್ಷರಂಗವನ್ನು ಆಳಿದವರು. ಅವರು ಸೇರಿ ಸ್ಥಾಪಿಸಿದ ಕಾವೀಃ ಸುಬ್ರಹ್ಮಣ್ಯೇಶ್ವರ ಯಕ್ಷ ಮಂಡಳಿಗೆಗೀಗ 51 ವರ್ಷ. ಉತ್ತಮ, ಸ್ಫುಟ ಬರವಣಿಗೆಯ ಮೂಲಕ ಅನೇಕ ಹಸ್ತಪ್ರತಿಗಳನ್ನು ತಾಳೆಗರಿ ಓಲೆಯಲ್ಲಿದ್ದುದ್ದನ್ನು ಬರೆದು ಯಕ್ಷ ಕವಿ ಮತ್ತು ಯಕ್ಷ ನಿರ್ದೇಶಕರಾಗಿ ಹಲವು ಹವ್ಯಾಸಿ ಕಲಾವಿದರ ಗುರುವೂ ಆಗಿದ್ದಾರೆ. ಅವರ ಹೆಸರಿನಲ್ಲಿ ವರ್ಕಾಡಿ ರವಿ ಅಲೆವೂರಾಯ ಹಾಗೂ ಮಧುಸೂದನ ಅಲೆವೂರಾಯರು ‘ಅಲೆವೂರಾಯರ ಪ್ರತಿಷ್ಠಾನ’ವನ್ನು ಸ್ಥಾಪಿಸಿ ಇದೀಗ 7ನೇ ವರ್ಷಾಚರಣೆಯನ್ನು ದಿನಾಂಕ 01-02-2024ರಿಂದ 03-02-2024ರವರೆಗೆ ಶ್ರೀಕ್ಷೇತ್ರ ಶರವಿನಲ್ಲಿ ಮೂರು ಬಯಲಾಟ ಹಾಗೂ ಸನ್ಮಾನಗಳನ್ನು ನಡೆಸಲಿದ್ದಾರೆ.
ಶ್ರೀಕ್ಷೇತ್ರ ಶರವಿನ ಶಿಲೆಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಹಾಗೂ ಡಾ. ಸುದೇಶ್ ಶಾಸ್ತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ಪ್ರೊ. ಎಂ.ಬಿ. ಪುರಾಣಿಕ್ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ವೀರ ಕುಶ-ಲವ’, ‘ಶ್ರೀ ಮಾತೇ ಭದ್ರಕಾಳಿ’ ಮತ್ತು ‘ತುಳನಾಡ ಬಲಿಯೇಂದ್ರೆ’ ಎಂಬ ಪೌರಾಣಿಕ ಪ್ರಸಂಗಗಳು ಬಯಲಾಟ ರೂಪದಲ್ಲಿ ಪ್ರದರ್ಶನಗೊಳ್ಳಲಿವೆ.
ಡಾ. ಹರಿಕೃಷ್ಣ ಪುನರೂರು, ಸುಧಾಕರ ರಾವ್ ಪೇಜಾವರ, ವಿಜಯಲಕ್ಷ್ಮೀ ಎಲ್.ಎನ್., ಸೌಮ್ಯಾ ಪುರುಷೋತ್ತಮ್, ರವೀಂದ್ರ ಪೂಜಾರಿ, ಕು. ಅನ್ವಿ ಉಪಸ್ಥಿತರಿದ್ದರು.