ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಬೆಳ್ತಂಗಡಿ ಯಕ್ಷಭಾರತಿಯ 9ನೇ ವಾರ್ಷಿಕೋತ್ಸವ ಪ್ರಯುಕ್ತ ಯಕ್ಷಭಾರತಿ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಯಕ್ಷಗಾನ ಪ್ರದರ್ಶನ ದಿನಾಂಕ 10-09-2023ರಂದು ಅಪರಾಹ್ನ ಗಂಟೆ 2ಕ್ಕೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕಣಿಯೂರು ರೈತಬಂಧು ಆಹಾರೋದ್ಯಮ ಸಂಸ್ಥೆಯ ಶ್ರೀ ಶಿವಶಂಕರ ನಾಯಕ್ ಇವರು ಉದ್ಘಾಟಿಸಲಿದ್ದಾರೆ. ಉಜಿರೆ ಶ್ರೀ ಜನಾರ್ದನ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಶರತ್ ಕೃಷ್ಣ ಪಡುವೆಟ್ನಾಯ, ಉಜಿರೆ ಗ್ರಾ.ಪಂ. ಅಧ್ಯಕ್ಷೆಯಾದ ಶ್ರೀಮತಿ ಉಷಾ ಕಿರಣ್ ಕಾರಂತ್, ಧರ್ಮಸ್ಥಳ ಗ್ರಾ.ಪ. ಉಪಾಧ್ಯಕ್ಷರಾದ ಶ್ರೀನಿವಾಸ ರಾವ್, ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾದ ಶ್ರೀ ಪ್ರೀತಮ್ ಡಿ. ಅತಿಥಿಗಳಾಗಿರುವರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ, ಸಂಘಟಕ ಶ್ರೀ ಭಾಸ್ಕರ ಬಾರ್ಯ ಅವರಿಗೆ ‘ಯಕ್ಷ ಭಾರತಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಿದ್ದಾರೆ.
ಸಂಜೆ 5ರಿಂದ ವಾರ್ಷಿಕ ಸಭಾ ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಜನಾರ್ದನ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಶಾಸಕರಾದ ಶ್ರೀ ಹರೀಶ್ ಪೂಂಜ, ಮೂಡಬಿದಿರೆ ಧನಲಕ್ಷ್ಮೀ ಕ್ಯಾಶೂ ಇಂಡಸ್ಟ್ರೀಸ್‌ನ ಶ್ರೀಪತಿ ಭಟ್, ಮೂಡುಬಿದ್ರಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀ ಸುಬ್ರಹ್ಮಣ್ಯ ಭಟ್, ಬೆಳ್ತಂಗಡಿ ನ್ಯಾಯವಾದಿ ಶ್ರೀ ಧನಂಜಯ್ ರಾವ್, ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಶ್ರೀ ಕೆ. ಮೋಹನ ಕುಮಾರ್ ಭಾಗವಹಿಸಲಿರುವರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಡಾ. ಮೋಹನದಾಸ ಗೌಡ ವೈದ್ಯರು ಕೊಕ್ಕಡ, ಶ್ರೀ ರಮೇಶ ಕಾರಂತ, ನಿವೃತ್ತ ದೈಹಿಕ ಶಿಕ್ಷಕರು, ಶ್ರೀ ಕೇಶವ ಭಟ್ ಅತ್ತಾಜೆ ಸಮಾಜ ಸೇವಕರು, ಶ್ರೀ ಆನಂದ ಶೆಟ್ಟಿ ಗುರುವಾಯನಕೆರೆ ಕಲಾವಿದರು, ಸಂಘಟಕರಿಗೆ ಸೇವಾ ಗೌರವಾರ್ಪಣೆ ನಡೆಯಲಿದ್ದು, ಯಕ್ಷ ಭಾರತಿ ಉಪಾಧ್ಯಕ್ಷ ಹರಿದಾಸ ಗಾಂಭೀರ ಧರ್ಮಸ್ಥಳ ಅವರನ್ನು ಅಭಿನಂದಿಸಲಿದ್ದಾರೆ.
ಅಪರಾಹ್ನ 2.30ರಿಂದ ಜಿಲ್ಲಾ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ‘ವೀರಸಮೀರಜಾತ’ (ಪುರುಷಾಮೃಗ-ದುಶ್ಯಾಸನ ವಧೆ-ಗದಾಯುದ್ಧ) ಯಕ್ಷಗಾನ ಪ್ರದರ್ಶನಗೊಳ್ಳಲಿದೆ.