ಕಾಂತಾವರ : ಯಕ್ಷದೇಗುಲ ಕಾಂತಾವರದ ವಾರ್ಷಿಕ ಆಟ, ಕೂಟ, ಬಯಲಾಟ ಸಹಿತ 23ನೇ ‘ಯಕ್ಷೋಲ್ಲಾಸ’ ಕಾರ್ಯಕ್ರಮವು ದಿನಾಂಕ 20 ಜುಲೈ 2025ರಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ರವರ ಅಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಜರಗಲಿದೆ.
ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಹನುಮಗಿರಿ ಮೇಳದ ಹಿರಿಯ ನಿವೃತ್ತ ಕಲಾವಿದರಾದ ಬಿ.ಸಿ. ರೋಡ್ ಶಿವರಾಮ ಜೋಗಿಯವರಿಗೆ ‘ಸವ್ಯಸಾಚಿ ಕಲಾವಿದ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ’ ಹಾಗೂ ಕಟೀಲು ಮೇಳದ ನಿವೃತ್ತ ಕಲಾವಿದ ಗುಂಡಿಮಜಲು ಗೋಪಾಲ ಭಟ್ರಿಗೆ ‘ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ಕಾಂತಾವರ ತಿಳಿಸಿರುತ್ತಾರೆ.