ಗಂಜಿಮಠ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಯಕ್ಷಧ್ರುವ – ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 08 ಜನವರಿ 2025ರಂದು ಪೂರ್ವಾಹ್ನ 9-00 ಗಂಟೆಗೆ ಗಂಜಿಮಠದ ಒಡ್ಡೂರು ಫಾರ್ಮ್ಸ್ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಕೀರ್ತಿಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಪೂರ್ವಾಹ್ನ 8-40 ಗಂಟೆಗೆ ಚೌಕಿ ಪೂಜೆ ನಡೆಯಲಿದ್ದು, ಬಳಿಕ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಯು. ಇವರಿಂದ ಈ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಪೊಳಲಿಯ ರಾಜರಾಜೇಶ್ವರಿ ಪ್ರೌಢ ಶಾಲೆಯ ಮಕ್ಕಳಿಂದ ‘ಗಿರಿಜಾ ಕಲ್ಯಾಣ’, ಮಂಚಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ಶಶಿಪ್ರಭಾ ಪರಿಣಯ’, ಮಣಿನಾಲ್ಕೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’, ಮಧ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ‘ಪುಣ್ಯಕೋಟಿ’, ಫರಂಗಿಪೇಟೆ ಶ್ರೀರಾಮ ಪ್ರೌಢ ಶಾಲೆಯ ಮಕ್ಕಳಿಂದ ‘ಹನುಮೋದ್ಭವ’, ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆ ಮಕ್ಕಳಿಂದ ‘ನರಕಾಸುರ ಮೋಕ್ಷ’, ಮುಲ್ಲಕಾಡು ಸರಕಾರಿ ಪ್ರೌಢ ಶಾಲೆ ಮಕ್ಕಳಿಂದ ‘ಭೂಮಿಜಾತ’, ಪೂಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲೆಯ ಮಕ್ಕಳಿಂದ ತರಣಿ ಸೇನ ಕಾಳಗ’, ಬೈಕಂಪಾಡಿ ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ಕೃಷ್ಣ ಲೀಲೆ’, ನೆಲ್ಲಿತೀರ್ಥ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ‘ಪೂರ್ವ ಭಂಗ’ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಕೀರ್ತಿಶೇಷ ಡಾ. ವೈ ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಪೂರ್ವಾಹ್ನ 9-15 ಗಂಟೆಗೆ ಶಾಸಕರಾದ ಡಾ. ಭರತ್ ಶೆಟ್ಟಿ ವೈ. ಇವರಿಂದ ಈ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಗುರುಪುರ ಉಳಾಯಿಬೆಟ್ಟು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳಿಂದ ‘ಪೂರ್ವರಂಗ’, ಕೊಯಿಲಾ ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ನರಕಾಸುರ ಮೋಕ್ಷ’, ನರಿಕೊಂಬು ಬೊಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ‘ಪೂರ್ವರಂಗ’, ಬೆಂಜನಪದವು ಸರಕಾರಿ ಪ್ರೌಢಶಾಲೆ ಶಾಲೆಯ ಮಕ್ಕಳಿಂದ ‘ಕೃಷ್ಣಲೀಲೆ’, ಪಂಜಿಕಲ್ಲು ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ಪೂರ್ವರಂಗ’, ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ ಕೃಷ್ಣ ಲೀಲೆ’, ಮೊಗರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ‘ಜಾಂಬವತಿ ಕಲ್ಯಾಣ’, ಕಡೇಶಿವಾಲಯ ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ಪಾಂಚಜನ್ಯ’, ಶಂಭೂರು ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ಅಗ್ರಪೂಜೆ’, ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ‘ಪೂರ್ವರಂಗ’, ಕಾಯರ್ಪಾಲ್ಕೆ ಮಣಿನಾಲ್ಕೂರು ಹೆಗ್ಡೆಸ್ ಪ್ರೈವೇಟ್ ಇಂಗ್ಲೀಷ್ ಮೀಡಿಯಮ್ ಹೈಯರ್ ಪ್ರೈಮರಿ ಸ್ಕೂಲ್ ಮಕ್ಕಳಿಂದ ‘ಪೂರ್ವರಂಗ’ ಪ್ರದರ್ಶನಗೊಳ್ಳಲಿದೆ. ಸಂಜೆ 5-00 ಗಂಟೆಗೆ ಸಮಾರೋಪ ಸಮಾರಂಭ ಜರಗಲಿದೆ.