ಕೋಟ : ಕಳೆದ 50 ವರ್ಷಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿರುವ ಹಂಗಾರಕಟ್ಟೆ, ಐರೋಡಿಯ ಯಕ್ಷಗಾನ ಕಲಾಕೇಂದ್ರ ಮಕ್ಕಳಿಗಾಗಿ ‘ನಲಿ- ಕುಣಿ’ ಯಕ್ಷಗಾನ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ.
ದಿನಾಂಕ 13-04-2024 ರಿಂದ 28-04-2024ರ ವರೆಗೆ ಬೆಳಿಗ್ಗೆ 9:15ರಿಂದ ಮಧ್ಯಾಹ್ನ 1.15ರ ವರೆಗೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಯಕ್ಷಗಾನ ನೃತ್ಯ ಹಾಗೂ ಅಭಿನಯ ತರಬೇತಿಯನ್ನು ನೀಡಲಾಗುವುದು. ಖ್ಯಾತ ಯಕ್ಷಗಾನ ವಿದ್ವಾಂಸರು ಹಾಗೂ ತರಬೇತುದಾರರಾದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರ ನಿರ್ದೇಶನದಲ್ಲಿ ನಡೆಯುವ ಈ ತರಬೇತಿ ಶಿಬಿರದಲ್ಲಿ ಸಹ ಶಿಕ್ಷಕರಾಗಿ ಗಣೇಶ ಚೇರ್ಕಾಡಿ ಭಾಗವಹಿಸಲಿದ್ದಾರೆ.
ತರಬೇತಿ ಶಿಬಿರವನ್ನು ಸೇರಲಿಚ್ಚಿಸುವ ವಿದ್ಯಾರ್ಥಿಗಳ ಪೋಷಕರು ರಾಜಶೇಖರ ಹೆಬ್ಬಾರ್, ಕಾರ್ಯದರ್ಶಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ (ದೂರವಾಣಿ ಸಂಖ್ಯೆ 9880605610) ಅಥವಾ ಗುಂಡ್ಮಿ ರಾಮಚಂದ್ರ ಐತಾಳ (ದೂರವಾಣಿ ಸಂಖ್ಯೆ 9448824559) ಅವರನ್ನು ಸಂಪರ್ಕಿಸಿ ದಿನಾಂಕ 10-04-2024ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು.
Subscribe to Updates
Get the latest creative news from FooBar about art, design and business.
ಐರೋಡಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಮಕ್ಕಳಿಗಾಗಿ ‘ನಲಿ- ಕುಣಿ’ ಯಕ್ಷಗಾನ ತರಬೇತಿ ಶಿಬಿರ | ಏಪ್ರಿಲ್ 13
No Comments1 Min Read
Previous Articleತುಳುಕೂಟ (ರಿ) ಕುಡ್ಲ ಸಂಸ್ಥೆಯಿಂದ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪ್ರಕಟ