ಕಾಸರಗೋಡು : ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ವೇಳೆ ಬಡಗು ತಿಟ್ಟು ಯಕ್ಷಗಾನ ನಾಟ್ಯ ವಾಚ್ಯ ವೈಭವ ದಿನಾಂಕ 05 ಆಗಸ್ಟ್ 2025ರ ಮಂಗಳವಾರ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಪ್ರಾಯೋಜಕತ್ವದಲ್ಲಿ ಗಯಚರಿತ್ರೆ – ಉಗ್ರಸೇನ ರುಚಿಮತಿ ಯಕ್ಷಗಾನ ಪ್ರದರ್ಶನ ಗೊಂಡಿತು. ರವೀಂದ್ರ ದೇವಾಡಿಗ ಕಮಲಶಿಲೆ, ಕಾರ್ತಿಕ ಚಿಟ್ಟಾಣಿ, ಸುಧೀರ ಉಳ್ಳೂರು ಇವರು ಮುಮ್ಮೇಳದಲ್ಲಿ ಗಮನ ಸೆಳೆದರು. ಇವರಿಗೆ ಹಿಮ್ಮೇಳದಲ್ಲಿ ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಯಲ್ಲಿ ಸುನೀಲ್ ಭಂಡಾರಿ ಕಡತೋಕ, ಚೆಂಡೆಯಲ್ಲಿ ನಯನ ಕುಮಾರ ನಿಟ್ಟೂರು ಉತ್ತಮ ಸಾಥ್ ನೀಡಿದರು. ನಂತರ ಶಿವಾನಿ ಕೂಡ್ಲು ಅವರಿಂದ ಕೇರಳ ನಡನಂ ನೃತ್ಯರೂಪಕ ನಡೆಯಿತು.
Subscribe to Updates
Get the latest creative news from FooBar about art, design and business.
Next Article ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ