ಹಳೆಯಂಗಡಿ : ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಶ್ರೀ ಪಟ್ಲ ಸತೀಶ ಶೆಟ್ಟಿಯವರ ನೇತೃತ್ವದಲ್ಲಿ ಯಕ್ಷಾಂತರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಮೊದಲ ಪ್ರದರ್ಶನ ದಿನಾಂಕ 17 ಸೆಪ್ಟೆಂಬರ್ 2025ರ ಬುಧವಾರದಂದು ನಡೆಯಲಿದೆ.
ನಾಗವೃಕ್ಷ ಕ್ಷೇತ್ರ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಕನ್ಯಾ ಸಂಕ್ರಮಣೋತ್ಸವದ ಅಂಗವಾಗಿ ಶಾರಧ್ವತ ಯಜ್ಞಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಿರಾತಾರ್ಜುನ ಹಾಗೂ ಕರ್ಣಾರ್ಜುನ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.

