ಸುಬ್ರಹ್ಮಣ್ಯ : ಸುಬ್ರಹ್ಮಣ್ಯದ ಶ್ರೀಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀವೇದವ್ಯಾಸ ವಿದ್ಯಾಲಯದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಪಡೆದ ವಿದ್ಯಾರ್ಥಿಗಳ ರಂಗ ಪ್ರವೇಶ ಹಾಗೂ ಗುರು ವಂದನಾ ಕಾರ್ಯಕ್ರಮ ದಿನಾಂಕ 09-04-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಯಕ್ಷಗಾನ ಕಲಾವಿದ ಮತ್ತು ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣರಾಜ ಕುಂಬ್ಳೆ “ಯಕ್ಷರಂಗ ಎಂಬುದು ಒಂದು ವಿಶಿಷ್ಟವಾದ ಪರಿಕಲ್ಪನೆ. ರಂಗಸ್ಥಳದಲ್ಲಿ ಭಾಗವಹಿಸುವಿಕೆ ಒಂದು ಪುಳಕ ತರುತ್ತದೆ. ಎಳವೆಯಲ್ಲಿಯೇ ಯಕ್ಷಗಾನ ಅಭಿರುಚಿ ಬೆಳೆಯುವುದರಿಂದ ಭವಿಷ್ಯದಲ್ಲಿ ಮಕ್ಕಳು ಸುಸಂಸ್ಕೃತರಾಗಲು ಅಡಿಗಲ್ಲಾಗುತ್ತದೆ.” ಎಂದು ಹೇಳಿದರು.
ಶ್ರೀಕೃಷ್ಣ ಶರ್ಮ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠಎಜುಕೇಶನ್ ಸೊಸೈಟಿ ಸಂಚಾಲಕ ಸುದರ್ಶನ ಜೋಯಿಸ ಕಾರ್ಯಕ್ರಮ ಉದ್ಘಾಟಿಸಿದರು. ನಾಟ್ಯ ಗುರು ಈಶ್ವರ ಪ್ರಸಾದ್ ನಿಡ್ಲೆ ಅತಿಥಿಯಾಗಿ ಭಾಗವಹಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸತ್ಯಶಂಕರ ಭಟ್, ವೇದವ್ಯಾಸ ವಿದ್ಯಾಲಯದ ಮುಖ್ಯ ಗುರು ಪ್ರಶಾಂತ್ ಬಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಗೌಡ ಬಿಳಿನೆಲೆ, ಉಮೇಶ್, ಮಹಾಬಲೇಶ್ವರ, ಕಾರ್ತಿಕ್ ಮುಂತಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ತರಗತಿ ವಿದ್ಯಾರ್ಥಿಗಳಿಂದ ಪೂರ್ವ ರಂಗ, ಗೋವಿಂದ ರಾಜ ಪಟ್ಟಾಭಿಷೇಕ – ಕಂಸವಧೆ ಪ್ರಸಂಗ ಪ್ರದರ್ಶನಗೊಂಡಿತು. ಬಳಿಕ ಹಿರಿಯಡ್ಕ ಮೇಳದವರಿಂದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನಗೊಂಡಿತು.