ಬೆಳ್ತಂಗಡಿ : ಕೊಯ್ಯೂರು ಪಂಚದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸಂಕ್ರಾಂತಿಯ ಪ್ರಯುಕ್ತ ‘ಸೌಗಂಧಿಕಾ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 15 ಜೂನ್ 2025ರಂದು ಕೊಯ್ಯೂರು ಪಂಚದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವತರಾಗಿ ಶ್ರೀ ಉಮೇಶ ಆಚಾರ್ಯ ಮತ್ತು ಕುಮಾರಿ ನಂದನ ಮಾಲೆಂಕಿ. ಮದ್ದಳೆ ಹಾಗೂ ಚೆಂಡೆಯಲ್ಲಿ ಶ್ರೀ ರತನ್ ಮತ್ತು ಸಮರ್ಥ್ ಹೊಳ್ಳ ಸಹಕರಿಸಿದರು, ಮುಮ್ಮೇಳದಲ್ಲಿ ದ್ರೌಪದಿಯಾಗಿ ಶ್ರೀರಾಮಕೃಷ್ಣ ಭಟ್ ಬಳೆಂಜ, ಭೀಮನಾಗಿ ದಿನೇಶ್ ಕೊಯ್ಯುರು, ಹನುಮಂತನಾಗಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಯಕ್ಷ ಮಂತ್ರಿಯಾಗಿ ಬಾಸಮೆ ನಾರಾಯಣ ಭಟ್ ಸಹಕರಿಸಿದರು. ದೇವಸ್ಥಾನದ ಮೋಕ್ತೇಸರ ಶ್ರೀಹರೀಶ್ ಬಲ್ಲಾಳ್ ಮತ್ತು ಪ್ರಧಾನ ಅರ್ಚಕ ಅಶೋಕ ಬಾಂಗಿನ್ನಾಯ ಕಲಾವಿದರನ್ನು ಗೌರವಿಸಿದರು. ಶ್ರೀಮತಿ ಕೆ. ಆರ್. ಸುವರ್ಣಕುಮಾರಿ ಸಹಕರಿಸಿದರು.