ಬದಿಯಡ್ಕ: ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನೀರ್ಚಾಲು ಇವರ ನೇತೃತ್ವದಲ್ಲಿ ಅಗ್ರಮಾನ್ಯ ಕಲಾವಿದರ ಕೂಡುವಿಕೆಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು 25 ಆಗಸ್ಟ್ 2024ರಂದು ಅಪರಾಹ್ನ 2 ಗಂಟೆಗೆ ನೀರ್ಚಾಲು ಶಾಲಾ ಸಭಾಂಗಣದಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸಲಿದ್ದಾರೆ. ‘ಊರ್ವಶಿ ಶಾಪ’ ಹಾಗೂ ‘ಉತ್ತರನ ಪೌರುಷ’ ಪ್ರಸಂಗದ ತಾಳಮದ್ದಳೆ ನಡೆಯಲಿದ್ದು, ಭಾಗವತರಾಗಿ ಬಲಿಪ ಶಿವಶಂಕರ ಭಟ್ ಹಾಗೂ ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ ಮದ್ದಳೆಯಲ್ಲಿ ಗಣೇಶ್ ಭಟ್ ಬೆಳಾಲು, ಲಕ್ಷ್ಮೀಶ ಬೇಂತ್ರೋಡಿ ಜೊತೆಗೂಡಲಿದ್ದಾರೆ. ಅರ್ಥದಾರಿಗಳಾಗಿ ಸರ್ವ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ಪವನ್ ಕಿರಣೆರೆ, ಪಕಳಕುಂಜ ಶ್ಯಾಮ ಭಟ್, ವೈಕುಂಠ ಹೇರ್ಳೆ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾತ್ರನಿರ್ವಹಣೆ ಮಾಡಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Comments are closed.