ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ರಾಜ ಗೋಪುರದಲ್ಲಿ ಪಾರ್ತಿಸುಬ್ಬ ವಿರಚಿತ ‘ಉರಗಾಸ್ತ್ರ ಪ್ರಯೋಗ’ ಎಂಬ ತಾಳಮದ್ದಳೆ ದಿನಾಂಕ 01-04-2024 ರಂದು ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ನಿತೀಶ್ ಕುಮಾರ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ , ಮುರಳೀಧರ ಕಲ್ಲೂರಾಯ ಹಾಗೂ ಮಾ. ಪರೀಕ್ಷಿತ್ ಸಹಕರಿಸಿದರು. ಅರ್ಥಧಾರಿಗಳಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲು ಶ್ರೀರಾಮನಾಗಿ, ಮನೋರಮಾ ಜಿ. ಭಟ್ ಲಕ್ಷ್ಮಣ ನಾಗಿ, ಶ್ರೀಧರ ರಾವ್ ಕುಂಬ್ಳೆ ಸೀತೆಯಾಗಿ, ಭಾಸ್ಕರ ಬಾರ್ಯ ವಿಭೀಷಣನಾಗಿ, ಗುಡ್ಡಪ್ಪ ಬಲ್ಯ ರಾವಣನಾಗಿ, ದುಗ್ಗಪ್ಪ ನಡುಗಲ್ಲು ಇಂದ್ರಜಿತುವಾಗಿ, ಹರಿಣಾಕ್ಷಿ ಜೆ.ಶೆಟ್ಟಿ ವಿದ್ಯುಜಿಹ್ವನಾಗಿ ಹಾಗೂ ಭಾರತಿ ರೈ ಅರಿಯಡ್ಕ ಸರಮೆಯಾಗಿ ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.