ತೆಕ್ಕಟ್ಟೆ: ಕೊಮೆ-ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ತೆಕ್ಕಟ್ಟೆಯ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಯಶಸ್ವೀ ಕಲಾವೃಂದ ಕೊಮೆಯ ‘ಸಿನ್ಸ್ 1999 ಶ್ವೇತಯಾನ – 33’ ಕಾರ್ಯಕ್ರಮದಡಿಯಲ್ಲಿ ‘ಯಕ್ಷ ಗಾನ ವೈಭವ’ ಕಾರ್ಯಕ್ರಮವು ದಿನಾಂಕ 07-06-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ “ಅವಕಾಶಗಳಿಗಾಗಿ ಕಾಯವುದು ತರವಲ್ಲ. ಅವಕಾಶಗಳನ್ನು ನಾವು ಕಂಡುಕೊಳ್ಳಬೇಕು. ತೆಕ್ಕಟ್ಟೆ ಯಕ್ಷಗಾನ ಕೇಂದ್ರವು ಇತ್ತೀಚೆಗೆ ಅನೇಕ ಕಲಾವಿದರನ್ನು ಹುಟ್ಟು ಹಾಕುತ್ತಿರುವ ಸಂಸ್ಥೆ. ಮಕ್ಕಳಲ್ಲಿ ಕಲಾಭಿರುಚಿ ಮೂಡಿಸಿ, ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯಾಗುವ ಭವಿಷ್ಯದ ಕುಡಿಗೆ ಸಂಸ್ಕಾರ ನೀಡುವ ಕಾರ್ಯವನ್ನು ನಿರಂತರ ಮಾಡುತ್ತಿರುವ ಯಶಸ್ವಿ ಸಂಸ್ಥೆಯನ್ನು ಶ್ಲಾಘಿಸಲೇಬೇಕು.” ಎಂದು ನುಡಿದರು.
ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶೇಖರ ಕಾಂಚನ್ ಮಾತನಾಡಿ “ದೇಶದಾದ್ಯಂತ ಹೆಸರಾಗಿರುವ ನಮ್ಮೂರ ಸಂಸ್ಥೆಯನ್ನು ಸ್ಥಳೀಯ ಸಂಸ್ಥೆಗಳು ಗುರುತಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಾಂಸ್ಕೃತಿಕ ವಲಯಕ್ಕೆ ಅಪಾರ ಕೊಡುಗೆ ನೀಡುತ್ತಾ ಜನಾನುರಾಗಿಯಾಗಿ ಬೆಳೆದು, ಇಪ್ಪತ್ತೈದರ ವರ್ಷಾಚರಣೆ ನಡೆಸಿಕೊಳ್ಳುತ್ತಿರುವಾಗ ಕಲಾಭಿಮಾನಿಗಳು ಪ್ರೋತ್ಸಾಹಿಸಬೇಕು. ಸಂಸ್ಥೆಯನ್ನು ಪ್ರೋತ್ಸಾಹಿಸಿದರೆ ನಮ್ಮೂರ ಕುಡಿಗಳನ್ನು ಪ್ರೋತ್ಸಾಹಿಸದ ಹಾಗೆ.” ಎಂದರು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಪಂಚಮಿ ವೈದ್ಯ, ಕಿಶನ್ ಪೂಜಾರಿ, ಸುನೀಲ್ ಭಂಡಾರಿ ಕಡತೋಕ, ಸುಜನ್ ಹಾಲಾಡಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಪರಿಚಯ ಲೇಖನ | ‘ಯಶಸ್ವೀ ಯಕ್ಷಕೋವಿದ’ ರಾಘವೇಂದ್ರ ಪೇತ್ರಿ