Subscribe to Updates

    Get the latest creative news from FooBar about art, design and business.

    What's Hot

    ಸಾಗರ ತಾಲೂಕಿನಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ | ಜೂನ್ 09

    June 3, 2025

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಸಮಾರೋಪಗೊಂಡ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ
    Yakshagana

    ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ

    January 8, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯ ಬಯಲಾಟ ಕಾರ್ಯಕ್ರಮವು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದಿನಾಂಕ 28-12-2023ರಂದು ಜರಗಿತು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಪಣಂಬೂರು ನಂದನೇಶ್ವರ ದೇವಳದ ಪ್ರಧಾನ ಅರ್ಚಕರಾದ ಶ್ರೀ ದೇವದತ್ತ ಶರ್ಮರು “ಯಕ್ಷಗಾನ ಕಲೆ ಈಗ ಸರ್ವಮಾನ್ಯವಾಗಿದೆ. ಹಿಂದಿಗಿಂತಲೂ ಹೆಚ್ಚಿನ ರಾಜ ಗಾಂಭೀರ್ಯದಿಂದ ಮೆರೆದು ಸಂಪನ್ನಗೊಳ್ಳುತ್ತಿದೆ. ಕಲಾಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಲೆಯನ್ನು ಗೌರವ ಭಾವನೆಯಿಂದ ಕಂಡು ಸಂಭ್ರಮಿಸುತ್ತಿದ್ದಾರೆ. ಕಲಾವಿದರೂ ಹೊಸ ರೀತಿಯಲ್ಲಿ ಹಳೆಯ ಪರಂಪರೆಯನ್ನು ರಸಿಕರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇದು ಕಲೆಗೆ-ಕಲಾವಿದರಿಗೆ ನೀಡುವ ಪ್ರೋತ್ಸಾಹ. ಇಂದು ಸರಕಾರವು ಸಂಸ್ಕೃತಿ ಇಲಾಖೆಯ ಮೂಲಕ ಕಲೆಗೆ ಬೇರೆ ಬೇರೆ ರೀತಿಯಲ್ಲಿ ಸಹಕರಿಸುತ್ತಾ ಬರುತ್ತಿರುವುದು ಸ್ವಾಗತಾರ್ಹ. ಇಂದಿನ ಕಾರ್ಯಕ್ರಮವನ್ನು ಸಂಘಟಿಸಿದ ಶ್ರೀ ರವೀಂದ್ರ ಪೂಜಾರಿಯವರಿಗೆ ಅಭಿನಂದನೆಗಳು” ಎಂದು ಹೇಳಿದರು.

    ಹಿರಿಯ ಯಕ್ಷಗಾನ ಕಲಾವಿದ ಪಿ. ಶ್ರೀಧರ ಐತಾಳರು “ಯಕ್ಷಗಾನದಲ್ಲಿ ಹೊಸ ಹೊಸ ಕಲಾವಿದರ ಪ್ರವೇಶ ಕಲೆಯ ಬೆಳವಣಿಗೆಗೆ ಪೂರಕ. ಕಲೆಯ ಉಳಿಯುವಿಕೆಗೆ ಇದು ಸಹಕಾರಿ” ಎಂದು ತಂಡಕ್ಕೆ ಶುಭ ಹಾರೈಸಿದರು. ಪಿ. ಅನಂತ ಐತಾಳರು ಅಧ್ಯಕ್ಷತೆ ವಹಿಸಿದ್ದರು. ವೇಷಧಾರಿ ಶ್ರೀ ಗಣಾಧಿರಾಜ ತಂತ್ರಿಗಳು ಯಕ್ಷಗಾನ ಕೂಟ ಸಂಘಟನೆಯ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು. ಶ್ರೀ ಗೋಪಾಲಕೃಷ್ಣ ಭಟ್ ದೇವಸ್ಯ ಪ್ರಾರ್ಥಿಸಿ, ಶ್ರೀಮತಿ ವೀಣಾ ಕೆ. ಉಜಿರೆ ನಿರ್ವಹಿಸಿ, ಪಿ.ಗಣಪತಿಯವರು ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ರವೀಂದ್ರ ಪೂಜಾರಿಯವರ ತಂಡದಿಂದ ‘ಜಾಂಬವತಿ ಕಲ್ಯಾಣ’ ಎಂಬ ಸಂಸ್ಕೃತಿ ಇಲಾಖಾ ಪ್ರಾಯೋಜಿತ ಯಕ್ಷಗಾನ ಬಯಲಾಟ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ವಿವೇಕಾನಂದ ಬಿ.ಎಡ್. ಕಾಲೇಜಿನಲ್ಲಿ ‘ಬಹುಭಾಷಾ ಕವಿಗೋಷ್ಠಿ’
    Next Article ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
    roovari

    Add Comment Cancel Reply


    Related Posts

    ಸಾಗರ ತಾಲೂಕಿನಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ | ಜೂನ್ 09

    June 3, 2025

    ಸಮಾರೋಪಗೊಂಡ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮ

    June 3, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಸ್ಪರ್ಧೆ- ಆಳ್ವಾಸ್ ಧೀಂಕಿಟ ಕೇಂದ್ರ ಪ್ರಥಮ

    June 3, 2025

    ತುಮಕೂರಿನ ಶ್ರೀ ಕೃಷ್ಣ ಮಂದಿರದಲ್ಲಿ ‘ಸುವರ್ಣ ಪರ್ವ -10’ | ಜೂನ್ 07

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.