ಸಿದ್ದಾಪುರ : ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್ ದಿನಾಂಕ 20-09-2023ರ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಉ.ಕ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಗೌರಾ ನಾಯ್ಕ ಮತ್ತು ಕನ್ನಮ್ಮ ದಂಪತಿಗಳಿಗೆ 1-09-1959ರಲ್ಲಿ ಜನಿಸಿದ ಇವರು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ 1984ರಲ್ಲಿ ತಮ್ಮ ಯಕ್ಷಗಾನ ಶಿಕ್ಷಣ ಆರಂಭಿಸಿದರು. ಮುಂದೆ ಗುರುಗಳಾದ ಶ್ರೀ ಕೆ.ಪಿ ಹೆಗಡೆ, ಸದಾನಂದ ಐತಾಳ, ದುರ್ಗಪ್ಪ ಗುಡಿಗಾರ, ಘೋರ್ಪಡೆ ವಿಠ್ಠಲಯ್ಯನವರು ಮತ್ತು ಶ್ರೀ ಸದಾನಂದ ಹೆಬ್ಬಾರರ ಮಾರ್ಗದರ್ಶನದಲ್ಲಿ ಪ್ರಬುದ್ದರಾಗಿ ಬೆಳೆದರು. ಸಣ್ಣಸ್ವರ, ಬಿಗಿಯಾದ ಲಯದ ಹಿಡಿತ ಹಾಗೂ ಸ್ಪಷ್ಟ ಸಾಹಿತ್ಯದ ಭಾಗವತರಾಗಿದ್ದ ಇವರು ಕೃತಿ ರಚನಾಕಾರರೂ ಆಗಿದ್ದರು.
ಶ್ರೀಯುತರು ಗೋಳಿಗರಡಿ, ರಂಜದಕಟ್ಟೆ, ಅಮೃತೇಶ್ವರಿ, ಕುಮಟ, ಪೆರ್ಡೂರು, ಸಾಲಿಗ್ರಾಮ,ಹಾಲಾಡಿ, ಮಡಾಮಕ್ಕಿ, ಶನೀಶ್ವರ, ಆಜ್ರಿ, ಕಳವಾಡಿ, ಸಿಗಂದೂರು ಇತ್ಯಾದಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 57ವರ್ಷ ವಯಸ್ಸಾಗಿದ್ದ ಇವರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂಧುಗಳು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಮಂಗಳೂರಿನಲ್ಲಿ ‘ಸ್ವರ ಕುಡ್ಲ’ ಸೀಸನ್-5 ಸಂಗೀತ ಸ್ಪರ್ಧೆ ಉದ್ಘಾಟನೆ
Next Article ನೃತ್ಯ ಲೋಕದಿಂದ ನೇಪಥ್ಯಕ್ಕೆ ಸರಿದ ಗುರು ಸರೋಜಾ ವೈದ್ಯನಾಥನ್