ಬ್ರಹ್ಮಾವರ : ಯಕ್ಷಶಿಕ್ಷಣ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಬ್ರಹ್ಮಾವರದ ನಿರ್ಮಲ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯ ಉದ್ಘಾಟನೆಯು ದಿನಾಂಕ 26 ಜುಲೈ 2025ರಂದು ನೆರವೇರಿತು.
ಶಾಲೆಯ ಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ಮಥಿಯಾಸ್ ಡಯಾಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್, ಹಿರಿಯ ಪತ್ರಕರ್ತರಾದ ಚಿತ್ತೂರು ಪ್ರಭಾಕರ್ ಆಚಾರ್ಯ, ಯಕ್ಷಗಾನ ಗುರುಗಳಾದ ಶರತ್ ರಾಜ್ ಆರೂರು ಹಾಗೂ ಯಕ್ಷಗಾನ ಉಸ್ತುವಾರಿ ಶಿಕ್ಷಕಿ ಶ್ರೀಮತಿ ಅನುರಾಧ ಉಪಸ್ಥಿತರಿದ್ದರು.