ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯು ಇದರ ವಾರ್ಷಿಕೋತ್ಸವದ ಪ್ರಯುಕ್ತ ಆನ್ಲೈನ್ ಯಕ್ಷಗಾನ ಗೊಂಬೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ಸ್ಪರ್ಧೆಯ ನಿಯಮಗಳು:
* ಸ್ಪರ್ಧೆಯು 18 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟು ಎರಡು ವಿಭಾಗದಲ್ಲಿ ನಡೆಯುತ್ತದೆ.
* 18 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸಲು ಜನ್ಮ ದಿನಾಂಕವನ್ನು ಒಳಗೊ೦ಡ ದಾಖಲೆಯನ್ನು ನೀಡಬೇಕು.
* ಬಿಡಿಸಿದ ಚಿತ್ರದ ಛಾಯಾ ಚಿತ್ರವನ್ನು ವಾಟ್ಸಪ್ ಮಾಡಿ, ಆನಂತರ ಬಿಡಿಸಿದ ಚಿತ್ರವನ್ನು ಅಂಚೆ ಮೂಲಕ ಕಳುಹಿಸಬೇಕು.
* ನೀವು ಚಿತ್ರ ಬಿಡಿಸುವ ಸಂದರ್ಭದ ವಿವಿಧ ಹಂತಗಳ ಫೋಟೋಗಳ PDF ಮಾಡಿ ಕಳುಹಿಸಬೇಕು.
* ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರಶಂಸನಾ ಪತ್ರ ಹಾಗೂ ನಗದನ್ನು ಅಕಾಡೆಮಿಯ ವಾರ್ಷಿಕೋತ್ಸವದಂದು ನೀಡಲಾಗುವುದು.
* ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರೂ ದಿನಾಂಕ 28-01-2024ರಂದು ನಡೆಯುವ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸನಾ ಪತ್ರವನ್ನು ಸ್ವೀಕರಿಸುವುದು.
* ಸ್ಪರ್ಧೆಗೆ ನೀಡಿದ ಚಿತ್ರವನ್ನು ಹಿಂದಿರುಗಿಸಲಾಗುವುದಿಲ್ಲ.
• ಆಯೋಜಕರ ತೀರ್ಮಾನವೇ ಅಂತಿಮ.
ಇಲ್ಲಿ ಕೊಟ್ಟಿರುವ ಯಕ್ಷಗಾನ ಗೊಂಬೆಯ ಚಿತ್ರವನ್ನೇ ಬಿಡಿಸಬೇಕು.
ಆಯೋಜಕರು : ಭಾಸ್ಕರ್ ಕೊಗ್ಗ ಕಾಮತ್, ಅಧ್ಯಕ್ಷರು, ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್(ರಿ) ಗೊಂಬೆ ಮನೆ, ಉಪ್ಪಿನಕುದ್ರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ -576230. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9448437848, 9449259389.