ಉಡುಪಿ : ಕುಂದಾಪುರ ತಾಲ್ಲೂಕಿನ ಮೋರ್ಟು-ಬೆಳ್ಳಾಲದ ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ (ರಿ.) ಇದರ ರಜತ ವರ್ಷದ ಸಂಭ್ರಮದ ಪ್ರಯುಕ್ತ ಮಕ್ಕಳಿಗಾಗಿ ಯಕ್ಷಗಾನ ಚಿತ್ರಕಲಾ ಸ್ಪರ್ಧೆಯನ್ನು ನೇರಳಕಟ್ಟೆಯ ಬ್ರಹ್ಮನಜೆಡ್ಡು, ಶ್ರೀ ಶಂಕರ ಧಾರ್ಮಿಕ ಸಭಾ ಭವನದಲ್ಲಿ ದಿನಾಂಕ 14-11-2023 ಮಂಗಳವಾರದಂದು ಸಂಜೆ 3 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.
ಮೂರು ಬೇರೆ ಬೇರೆ ವಿಭಾಗಗಳು ಮತ್ತು ಸ್ಪರ್ಧೆಯ ವಿಷಯ:
1] 1ರಿಂದ 3ನೇತರಗತಿಯವರಿಗೆ, ವಿಷಯ : ಯಕ್ಷಗಾನ ವೇಷದ ಮುಖವರ್ಣಿಕೆ
2] 4ರಿಂದ 7ನೇ ತರಗತಿಯವರೆಗೆ, ವಿಷಯ : ಯಕ್ಷಗಾನದ ರಾಜವೇಷ/ಪುಂಡುವೇಷ
3] 8ರಿಂದ 10ನೇ ತರಗತಿಯವೆರೆಗೆ, ವಿಷಯ : ಯಕ್ಷಗಾನದ ಬಣ್ಣದವೇಷ
* ಭಾಗವಹಿಸಲಿಚ್ಚಿಸುವ ಮಕ್ಕಳು ತಮ್ಮ ಹೆಸರು, ವಯಸ್ಸು, ತರಗತಿ, ಶಾಲೆ, ಪೋಷಕರ ಮೊಬೈಲ್ ಸಂಖ್ಯೆಯನ್ನು 9986363495 ಈ ನಂಬರಿಗೆ ವಾಟ್ಸಪ್ ಮಾಡಿ, ದಿನಾಂಕ 10-11-2023ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಂಡವರಿಗೆ ಮಾತ್ರ ಅವಕಾಶ. ನೋಂದಣಿ ಮಾಡುವಾಗ ನೀಡಿದ ವಿವರಗಳನ್ನು ಬಳಸಿ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಮಾತ್ರವೇ ಪರಿಗಣಿಸಲಾಗುವುದು.
* ಸ್ಪರ್ಧೆಯ ದಿನ ಮಧ್ಯಾಹ್ನ ಸಮಯ 2.30ರ ಒಳಗಾಗಿ ಸ್ಥಳಕ್ಕೆ ಆಗಮಿಸಬೇಕು ಹಾಗೂ ಶಾಲಾ ಗುರುತಿನ ಕಾರ್ಡನ್ನು (school identity card) ಕಡ್ಡಾಯವಾಗಿ ತೋರಿಸಬೇಕು (hardcopy).
* ಚಿತ್ರಬಿಡಿಸಲು ಹಾಳೆಯನ್ನು (Drawing sheet) ಸ್ಥಳದಲ್ಲೇ ಕೊಡಲಾಗುವುದು. ಚಿತ್ರ ಬಿಡಿಸಿ, ಬಣ್ಣ ಹಾಕಲು ಬೇಕಾದ ಉಳಿದೆಲ್ಲ ಸಲಕರಣೆಗಳನ್ನು ಸ್ಪರ್ಧಿಗಳೇ ತರಬೇಕು.
* ಚಿತ್ರ ಬಿಡಿಸುವ ಸಂದರ್ಭದಲ್ಲಿ ಮೊಬೈಲ್ ಬಳಸುವಂತಿಲ್ಲ. ಪೋಷಕರು ಮಕ್ಕಳ ಜೊತೆ ಇರುವಂತಿಲ್ಲ.
* ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿರುತ್ತವೆ.
* ನಿರ್ಣಾಯಕರು ವಿಜೇತರನ್ನು ಆರಿಸುತ್ತಾರೆ. 2024ನೇ ಜನವರಿ ತಿಂಗಳಲ್ಲಿ ನಡೆಯುವ ಸಮಿತಿಯ ವಾರ್ಷಿಕೋತ್ಸವ ಸಮಾರಂಭದಂದು ಪ್ರಶಸ್ತಿಗಳ ವಿತರಣೆ.
* ತೀರ್ಪುಗಾರರ ತೀರ್ಮಾನವೇ ಅಂತಿಮ.