ಉಡುಪಿ : ನಾಡೋಜ ಡಾ. ಜಿ. ಶಂಕರರ ಸಪ್ತತಿಯ ಶುಭಾವಸರದಲ್ಲಿ ಉಡುಪಿಯ ತಾಲೂಕಿನ ಸಾಮಾಜಿಕ – ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ ವತಿಯಿಂದ ದಿನಾಂಕ 07 ಅಕ್ಟೋಬರ್ 2025ರಂದು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪುಷ್ಪಗುಚ್ಛ, ಅಭಿನಂದನಾ ಪತ್ರ ನೀಡಿ ಶುಭ ಹಾರೖಸಿದರು.
ನಿರಂತರ ಕಲೆ, ಶಿಕ್ಷಣ, ಆರೋಗ್ಯವೂ ಸೇರಿದಂತೆ ಸಮಾಜದಲ್ಲಿ ಕಷ್ಟದಲ್ಲಿರುವವರ ಕಾಮಧೇನುವಾಗಿರುವ ಡಾ. ಜಿ. ಶಂಕರರು ತಮ್ಮ ಸಪ್ತತಿಯನ್ನು ಈ ಎಲ್ಲಾ ಸೇವಾಕಾರ್ಯಗಳನ್ನು ಅತಿಶಯವಾಗಿ ನಡೆಸಿ ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಗೀತಾನಂದ ಫೌಂಡೇಶನ್ ಅಧ್ಯಕ್ಷರಾದ ಆನಂದ ಸಿ. ಕುಂದರ್ ಜೊತೆಗಿದ್ದರು. ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ನಾರಾಯಣ ಎಂ. ಹೆಗಡೆ, ವಿಷ್ಣುಮೂರ್ತಿ ಆಚಾರ್ಯ, ಎಚ್. ಸುಜಯೀಂದ್ರ ಹಂದೆ, ಗಣೇಶ ಬ್ರಹ್ಮಾವರ, ಡಾ. ರಾಜೇಶ ನಾವಡ, ಶ್ರೀಪತಿ ಕಾಮತ್, ಪ್ರಭಾಕರ ಭಂಡಿ, ನಾಗರಾಜ ಹೆಗಡೆ ಉಪಸ್ಥಿತರಿದ್ದರು.