ಕೋಟೇಶ್ವರ : ಶ್ವೇತಛತ್ರ ಯಕ್ಷಮಿತ್ರ (ರಿ.) ಕೋಣಿ ಕುಂದಾಪುರ ಇವರ ಸಂಯೋಜನೆಯಲ್ಲಿ ತೆಂಕು ಹಾಗೂ ಬಡಗಿನ ಪ್ರಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 10 ಆಗಸ್ಟ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿರುವ ಯುವ ಮೆರಿಡಿಯನ್ ಗ್ರ್ಯಾಮಿ ಬಾಲ್ ರೂಮ್ ಇಲ್ಲಿ ಆಯೋಜಿಸಲಾಗಿದೆ. ಕೀರಿಕಾಡು ಮಾ. ವಿಷ್ಣು ಭಟ್ಟ ರಚಿಸಿರುವ ಶ್ವೇತಕುಮಾರ ಚರಿತ್ರೆ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ತೆಂಕು ಹಿಮ್ಮೇಳದಲ್ಲಿ ಶ್ರೀಮತಿ ಕಾವ್ಯಶ್ರೀ ಅಜೇರು, ಮದ್ದಲೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯ ಮತ್ತು ಚಂಡೆಯಲ್ಲಿ ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ ಹಾಗೂ ಬಡಗು ಹಿಮ್ಮೇಳದಲ್ಲಿ ಸುರೇಶ್ ಶೆಟ್ಟಿ ಎಸ್., ಕುಮಾರಿ ಚಿಂತನಾ ಹೆಗಡೆ ಮಾಳ್ಕೋಡು, ಮದ್ದಲೆಯಲ್ಲಿ ಸುನಿಲ್ ಭಂಡಾರಿ, ಎನ್.ಜಿ. ಹೆಗಡೆ ಮತ್ತು ಚಂಡೆಯಲ್ಲಿ ಶಿವಾನಂದ ಕೋಟ, ರಾಧಾಕೃಷ್ಣ ಕುಂಜತ್ತಾಯ ಇವರುಗಳು ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ನವೀನ್ ಶೆಟ್ಟಿ ಐರ್ ಬೈಲು, ಸುಧೀರ್ ಉಪ್ಪೂರು, ವಿಶ್ವನಾಥ್ ಕಿರಾಡಿ, ನಾಗೇಶ್ ಆಚಾರ್ಯ ಬೈಲೂರು, ಸೀತಾರಾಮ್ ಕುಮಾರ್ ಕಟೀಲು, ಕಾರ್ತಿಕ್ ಪಾಂಡೇಶ್ವರ, ವಿದ್ಯಾಧರ ರಾವ್ ಜಲವಳ್ಳಿ, ಕಾರ್ತಿಕ್ ಚಿಟ್ಟಾಣಿ, ರಾಘವೇಂದ್ರ ಪೇತ್ರಿ, ನಿತಿನ್ ಶೆಟ್ಟಿ ಸಿದ್ಧಾಪುರ ಮತ್ತು ಸತೀಶ್ ಯಡಮೊಗೆ ಭಾಗವಹಿಸಲಿದ್ದಾರೆ.