ಸಿದ್ಧಾಪುರ : ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಸಂಘ ಕೊಳಗಿ-ಶಿರಳಗಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಎಂ.ಎಂ. ಹೆಗಡೆ ವಿರಚಿತ ‘ಲವ ಕುಶ’ ಯಕ್ಷಗಾನ ಪ್ರದರ್ಶನವನ್ನು 30ನೇ ವರ್ಷದ ಮೂಲೆಗದ್ದೆ ಭೂತಪ್ಪನ ಕಟ್ಟೆ ಕಾರ್ತಿಕೋತ್ಸವದ ನಿಮಿತ್ತ ದಿನಾಂಕ 02 ಡಿಸೆಂಬರ್ 2025ರಂದು ರಾತ್ರಿ 9-00 ಗಂಟೆಗೆ ಮೂಲೆಗದ್ದೆ ಭೂತಪ್ಪನ ಕಟ್ಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ ಭಾಗವತರು, ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ ಮತ್ತು ಚಂಡೆ ವಿಘ್ನೇಶ್ವರ ಗೌಡ ಕೆಸರಕೊಪ್ಪ ಮತ್ತು ಮುಮ್ಮೇಳದಲ್ಲಿ ತಿಮ್ಮಪ್ಪ ಹೆಗಡೆ ಶಿರಳಗಿ, ಅಶೋಕ ಭಟ್ ಸಿದ್ಧಾಪುರ, ವಸಂತ ಹೆಗಡೆ ಕೊಳಗಿ, ಕು. ತುಳಸಿ ಹೆಗಡೆ ಬೆಟ್ಟಕೊಪ್ಪ, ಕು. ಮೈತ್ರಿ ಸಂಪೇಸರ ಮತ್ತು ಅವಿನಾಶ ಹೆಗಡೆ ಕೊಪ್ಪ ಇವರುಗಳು ಸಹಕರಿಸಲಿದ್ದಾರೆ.

