ಬೆಂಗಳೂರು : ಪಿ.ಪಿ.ಎಚ್. ಕನ್ನಡ ಸಂಘ ಪ್ರೆಸ್ಟೀಜ್ ಪ್ರಿಮ್ ರೋಸ್ ಹಿಲ್ಸ್ ಇವರ ವತಿಯಿಂದ ಶ್ರೀ ವೀರಾಂಜನೇಯ ಯಕ್ಷ ಮಿತ್ರ ಮಂಡಳಿ, ಬಂಗಾರಮಕ್ಕಿ ಮೊಗೆಹಳ್ಳ ಹೊನ್ನಾವರ (ಉ.ಕ.) ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಬಳಗ ಪ್ರಸ್ತುತ ಪಡಿಸುತ್ತಿರುವ ‘ಕಾರ್ತವೀರ್ಯಾರ್ಜುನ’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 22 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ಪ್ರೆಸ್ಟೀಜ್ ಪ್ರಿಮ್ ರೋಸ್ ಹಿಲ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಭಾಗವತರು ಗಾನಕೋಗಿಲೆ ಶ್ರೀ ಶಂಕರ ಭಟ್ಟ ಬ್ರಹ್ಮೂರು, ಮದ್ದಲೆಯಲ್ಲಿ ಮದ್ದಲೆ ಮಾಂತ್ರಿಕ ಶ್ರೀ ಸುನೀಲ್ ಭಂಡಾರಿ ಕಡತೋಕ ಮತ್ತು ಚಂಡೆಯಲ್ಲಿ ಶ್ರೀ ಗಜಾನನ ಹೆಗಡೆ ಸಾಂತೂರು ಹಾಗೂ ಮುಮ್ಮೇಳದಲ್ಲಿ ‘ಕಾರ್ತವೀರ್ಯ’ ಯಕ್ಷರಂಗದ ಮೇರು ಕಲಾವಿದರಾದ ಯಕ್ಷ ದಿಗ್ಗಜ ಅಭಿನಯ ಚತುರ ಶ್ರೀ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ‘ರಾವಣ’ ಶ್ರೀ ಪ್ರಶಾಂತ ವರ್ಧನ ಮೂರೂರು, ‘ವಿಭೀಷಣ’ ಶ್ರೀ ಹವ್ಯಕ ಮಂಜು, ‘ಪ್ರಹಸ್ತ’ ಶ್ರೀ ರಾಮಕೃಷ್ಣ ಭಟ್ಟ, ‘ದೂತ’ ಹಾಸ್ಯ ಚಕ್ರವರ್ತಿ ಶ್ರೀ ನಾಗೇಂದ್ರ ಭಟ್ಟ, ‘ಸಖಿಯರು’ ಶ್ರೀ ರಕ್ಷಿತಾ ಕುಳಿಮನೆ ಮತ್ತು ಶ್ರೀ ಹೆಬ್ಬಾರ, ‘ಮೂಗದೂತ’ ಶ್ರೀ ನಾಗೇಂದ್ರ ಮೂರೂರು ಇವರುಗಳು ಸಹಕರಿಸಲಿದ್ದಾರೆ.

