ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಸಂಸ್ಕೃತಿ ಸಂಭ್ರಮದಲ್ಲಿ ಯಕ್ಷವರ್ಷ 2025 ಕಾರ್ಯಕ್ರಮವನ್ನು ದಿನಾಂಕ 02 ಮಾರ್ಚ್ 2025ರಂದು ಸಂಜೆ 6 -00 ಗಂಟೆಗೆ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೂಲ್ಕಿ ರಾಮಕೃಷ್ಣಯ್ಯ ರಚಿತ ‘ಸುಧನ್ವಾರ್ಜುನ’ ಪ್ರಸಂಗದ ಯಕ್ಷಗಾನದಲ್ಲಿ ಸರ್ವಶ್ರೀಗಳಾದ ಉದಯ ಹೊಸಾಳ, ಚಂದ್ರಯ್ಯ ಆಚಾರ್, ರಾಕೇಶ್ ಮಲ್ಯ, ವಿಶ್ವನಾಥ ಹೆನ್ನಾಬೈಲ್, ಮಾಧವ ನಾಗೂರು, ಸುನೀಲ್ ಹೊಲಾಡ್ ವಂಡ್ಸೆ, ಆದಿತ್ಯ ಹೆಗಡೆ, ಪೇತ್ರಿ ರಾಘವೇಂದ್ರ, ವರುಣ ಹೆಗಡೆ ಇವರುಗಳು ಭಾಗವಹಿಸಲಿದ್ದಾರೆ.