ಬೆಂಗಳೂರು : ಯಕ್ಷದೇಗುಲ (ರಿ.) ಬೆಂಗಳೂರು ಇವರ ಸಂಯೋಜನೆಯಲ್ಲಿ ‘ಲವ ಕುಶ ಕಾಳಗ’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 07 ಜನವರಿ 2026ರಂದು ಸಂಜೆ ಗಂಟೆ 6-15ಕ್ಕೆ ಬೆಂಗಳೂರಿನ ಬುಲ್ ಟೆಂಪಲ್ ರೋಡ್, ರಾಮಕೃಷ್ಣ ಆಶ್ರಮ, ಬೆಂಗಳೂರಿನ ಸ್ವಾಮಿ ವಿವೇಕಾನಂದ ಶತಾಬ್ಧಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ ನಿಟ್ಟೂರು, ಮದ್ದಲೆಯಲ್ಲಿ ಸಂಪತ್ ಕುಮಾರ್ ಮತ್ತು ಚಂಡೆಯಲ್ಲಿ ಆದಿತ್ಯ ಹಾಗೂ ಮುಮ್ಮೇಳದಲ್ಲಿ ಬಾಲಕೃಷ್ಣ ಭಟ್, ತಮ್ಮಣ್ಣ ಗಾಂವ್ಕರ್, ದಿನೇಶ್ ಕನ್ನಾರ್, ಪ್ರಶಾಂತ ವರ್ಧನ, ಸಂತೋಷ್, ದೇವರಾಜ್ ಕರಬ, ಶ್ರೀರಾಮ್, ಶ್ರೀವತ್ಸಾ, ಹರ್ಷಿತ್, ಶಾಶ್ವತ್, ಸುಹಾಸ್ ಇನ್ನಿತರರು ಸಹಕರಿಸಲಿದ್ದಾರೆ.

