ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸತ್ಯ ಸಾರಮಾನಿ ಯಕ್ಷಗಾನ ಕಲಾ ಮಂಡಳಿ ಮಿಜಾರ್ ಇವರ ಜಂಟಿ ಆಶ್ರಯದಲ್ಲಿ ತುಳು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದ ಸಿರಿ ಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಬುದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತುಳು ನಾಡಿನ ಅವಳಿ ವೀರರ ಪಾಡ್ದನ ಸಾಹಿತ್ಯ ಆಧಾರಿತ ಅಮರ ಕಥೆ ‘ಕಾರ್ನಿಕದ ಕಾನದ ಕಟದೆರ್’ ಪ್ರಸಂಗದ ಯಕ್ಷಗಾನದ ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಮತ್ತು ಚಂದ್ರಶೇಖರ ಕಕ್ಕೆಪದವು ಭಾಗವತರಾಗಿ, ಆನಂದ ಪಡ್ರೆ ಚಂಡೆಯಲ್ಲಿ, ಗುರುಪ್ರಸಾದ್ ಬೊಳಿಂಜಡ್ಕ ಮದ್ದಲೆಯಲ್ಲಿ ಮತ್ತು ರಾಮ ಬಿ. ಅರಳ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ.