ಸಾಣೇಹಳ್ಳಿ : ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 2025-26ನೆಯ ಸಾಲಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಅಭ್ಯಾಸ ಮಾಲಿಕೆಯ ಯಕ್ಷಗಾನ ಪ್ರಯೋಗ ದಿನಾಂಕ 12 ಸೆಪ್ಟೆಂಬರ್ 2025ರಂದು ಸಂಜೆ 7-00 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಹಟ್ಟಿಯಂಗಡಿ ರಾಮ ಭಟ್ಟ ರಚಿತ ‘ಅತಿಕಾಯ ಮತ್ತು ಇಂದ್ರಜಿತು ಕಾಳಗ’ ಪ್ರಸಂಗವನ್ನು ಭಾರ್ಗವ ಕೆ.ಎನ್. ಇವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲಿದ್ದು, ಕುಶ ಎಂ.ಆರ್. ಇವರು ಮದ್ದಲೆ, ನಾಗಭೂಷಣ ಕೆ.ಎಸ್. ಇವರು ಚಂಡೆಯಲ್ಲಿ, ಶೈಲೇಶ್ ತೀರ್ಥಹಳ್ಳಿ ಯಕ್ಷಗಾನ ಹೆಜ್ಜೆಗಾರಿಕೆಯಲ್ಲಿ ಹಾಗೂ ಶ್ರೀ ಮಹಾ ಗಣಪತಿ ಶ್ರೀ ವೀರಾಂಜನೇಯ ಯಕ್ಷಗಾನ ಮಂಡಲಿ ಕೇಡಲಸರ ಪ್ರಸಾಧನದಲ್ಲಿ ಸಹಕರಿಸಲಿದ್ದಾರೆ.