ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಾಂಸ್ಕೃತಿಕ ಸಮಿತಿ ಹಾಗೂ ಕಲಾಕೇಂದ್ರದ ಸಹಯೋಗದೊಂದಿಗೆ ದಿನಾಂಕ 05-05-2024ರ ಭಾನುವಾರ ಸಂಜೆ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಎಸ್.ಡಿ.ಎಂ. ಕಲಾವೈಭವ ವಿದ್ಯಾರ್ಥಿಗಳ ತಂಡದಿಂದ ‘ಸುಧನ್ವ ಮೋಕ್ಷ’ ಎಂಬ ಒಂದು ಘಂಟೆ ಅವಧಿಯ ಯಕ್ಷಗಾನ ಪ್ರಸಂಗವು ಪ್ರದರ್ಶಿಸಲ್ಪಟ್ಟಿತು.
ಹಿಮ್ಮೇಳದಲ್ಲಿ ಭಾಗವತಿಕೆ ಸಿಂಚನ ಮೂಡುಕೋಡಿ, ಚೆಂಡೆ ಆದಿತ್ಯ ಹೊಳ್ಳ ಮತ್ತು ಮದ್ದಳೆಯಲ್ಲಿ ಪುರಂದರ ನಾರಿಯ ಸಹಕರಿಸಿದರು. ಮುಮ್ಮೇಳದಲ್ಲಿ ಸೌರವ್ ಶೆಟ್ಟಿ – ಅರ್ಜುನನಾಗಿ, ಸೌಜನ್ಯ – ವೃಷಕೇತುವಾಗಿ, ಶ್ರುತಿ – ಪ್ರದ್ಯುಮ್ನನಾಗಿ, ಜಿ.ವಿ. ವಿಜೇತ್ – ಅನುಸಾಲ್ವನಾಗಿ, ಅಮೋಘ ಶಂಕರ್ – ದೂತನಾಗಿ, ಕೀರ್ತನ್ ಯು. ಹಂಸಧ್ವಜನಾಗಿ, ಜಿ. ಸುಬ್ರಹ್ಮಣ್ಯ – ಸುಧನ್ವನಾಗಿ, ಸಾಕ್ಷಿ ಎಂ.ಕೆ. – ಸುಗರ್ಭೆಯಾಗಿ, ದೀಪಶ್ರೀ – ಪ್ರಭಾವತಿಯಾಗಿ ಮತ್ತು ಪ್ರಾವಿಣ್ಯ – ಕೃಷ್ಣನಾಗಿ ಸಹಕರಿಸಿದರು.
ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಶ್ರೀಮತಿ ಸೋನಿಯಾ ಯಶೋವರ್ಮ ಹಾಗೂ ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎ. ಕುಮಾರ ಹೆಗ್ಡೆ ಆಗಮಿಸಿದ್ದರು. ಊರಿನ ಗಣ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ಪದವಿ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಸುಧೀರ್ ಕೆ.ವಿ. ಸ್ವಾಗತಿಸಿ, ಯಕ್ಷಗಾನ ವಿದ್ಯಾರ್ಥಿನಿ ಕು. ಮನಸ್ವಿನಿ ಧನ್ಯವಾದ ಸಮರ್ಪಣೆ ನೆರವೇರಿಸಿದರು.