ಬೆಳೆಯೂರು : ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಕೇರಂ ನೆಮ್ಮದಿ ಕೇಂದ್ರ ಬೆಳೆಯೂರು ಇವರ ಸಹಯೋಗದಲ್ಲಿ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಮೋಘ ಯಕ್ಷಗಾನ ಬಯಲಾಟವನ್ನು ದಿನಾಂಕ 07 ನವೆಂಬರ್ 2025ರಂದು ಬೆಳೆಯೂರು ಇಲ್ಲಿ ಆಯೋಜಿಸಲಾಗಿದೆ.
‘ಭೀಷ್ಮ ಪ್ರತಿಜ್ಞೆ ವಿಜಯ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಸೃಜನ್ ಗಣೇಶ್ ಹೆಗಡೆ, ಶಶಾಂಕ್ ಆಚಾರ್ಯ, ಗಣೇಶ್ ಗಾಂವ್ಕರ್, ಮಂಜುನಾಥ ಗುಡ್ಡೇದಿಂಬ ಹಾಗೂ ಮುಮ್ಮೇಳದಲ್ಲಿ ಸುಧೀರ ಉಪ್ಪೂರು, ಮಾಧವ ನಾಗೂರು, ಶಿವು ಶಿರಳಗಿ, ಅವಿನಾಶ್ ಕೊಪ್ಪ, ರವೀಂದ್ರ ದೇವಾಡಿಗ, ಪುರಂದರ ಮೂಡ್ಕಣಿ, ವಿದ್ಯಾಧರ ಜಲವಳ್ಳಿ, ಸಂಜಯ ಬೆಳೆಯೂರು, ಕಾರ್ತಿಕ ಜಿಟ್ಟಾಣಿ, ಸನ್ಮಯ ಭಟ್, ಮಹಾಬಲೇಶ್ವರ ಗೌಡ, ಲಕ್ಷ್ಮಣ ಮಾಸೂರು, ಜನಾರ್ದನ ಹಾರ್ಸಿಕಟ್ಟಾ ಇವರುಗಳು ಸಹಕರಿಸಲಿದ್ದಾರೆ.

