ಮಂಗಳೂರು : ರಂಗಸ್ಥಳ ಮಂಗಳೂರು (ರಿ.) ಇದರ ದಶಮಾನೋತ್ಸವ ಪ್ರಯುಕ್ತ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟವು ದಿನಾಂಕ 22 ಫೆಬ್ರವರಿ 2025ರಂದು ರಾತ್ರಿ 8-00 ಗಂಟೆಗೆ ಕದ್ರಿ ಶ್ರೀ ದೇವಳದ ರಾಜಾಂಗಣದಲ್ಲಿ ನಡೆಯಲಿದೆ.
ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ಅಶೋಕ ಭಟ್ ಸಿದ್ಧಾಪುರ ಇವರುಗಳು ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದು, ‘ಚಂದ್ರಾವಳಿ ವಿಲಾಸ’ ಮತ್ತು ‘ರತ್ನಾವತಿ ಕಲ್ಯಾಣ’ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.