ಉಡುಪಿ : ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.) ಉಡುಪಿ, ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಹಾಗೂ ಉಜ್ವಲ್ ಡೆವಲಪ್ಪರ್ಸ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 19 ಜುಲೈ 2025ರಂದು ಸಂಜೆ 3-00 ಗಂಟೆಗೆ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಸ್ಮಾರಕ ‘ಯಕ್ಷಸಾಧಕ’ ಪ್ರಶಸ್ತಿಯನ್ನು ಶ್ರೀ ವಿದ್ಯಾಧರ ರಾವ್ ಜಲವಳ್ಳಿ ಇವರಿಗೆ ಪ್ರದಾನ ಮಾಡಲಾಗುವುದು. ‘ಕೃಷ್ಣಾರ್ಜುನ ಕಾಳಗ’ ಮತ್ತು ‘ರಾಜಾ ಭದ್ರಸೇನ’ ಎಂಬ ಪ್ರಸಂಗದ ಯಕ್ಷಗಾನ ಕಾರ್ಯಕ್ರಮದ ಮುಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ ಜನ್ಸಾಲೆ, ಚೆಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಮತ್ತು ಮದ್ದಳೆಯಲ್ಲಿ ಶಶಾಂಕ ಆಚಾರ್ಯ ಕಿರಿಮಂಜೇಶ್ವರ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ನೀಲ್ಕೋಡು ಶಂಕರ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ರವೀಂದ್ರ ದೇವಾಡಿಗ ಕಮಲಶಿಲೆ, ಚಂದ್ರಹಾಸ ಗೌಡ ಹೊಸಪಟ್ನ, ಕೆ.ಜಿ. ಕಾರ್ತಿಕ, ಸುಧೀರ ಉಪ್ಪೂರು, ಕಾರ್ತಿಕ ಕಣ್ಣಿಮನೆ, ವಿದ್ಯಾಧರ ರಾವ್ ಜಲವಳ್ಳಿ, ಉದಯ ಹೆಗಡೆ ಕಡಬಾಳ, ಪವನ್ ಕುಮಾರ್ ಸಾನ್ಮನೆ ಮತ್ತು ಸಂತೋಷ ಹಿಲಿಯಾಣ ಭಾಗವಹಿಸಲಿದ್ದಾರೆ.