ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹಯೋಗದಲ್ಲಿ ಡಾ. ಕೋಟ ಶಿವರಾಮ ಕಾರಂತರ 122ನೇ ಜನ್ಮದಿನಾಚರಣೆ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರ ಗುರುವಾರದಂದು ಮಧ್ಯಾಹ್ನ 3-00 ಗಂಟೆಗೆ ಕುಂಜಿಬೆಟ್ಟಿನ ಐ.ವೈ.ಸಿ, ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ವಹಿಸಲಿದ್ದು, ಮಾಹೆಯ ಕುಲಪತಿಗಳಾದ ಡಾ. ಲೆ.ಜ.ಡಾ.ಎಂ.ಡಿ. ವೆಂಕಟೇಶ್, ಡಾ. ನಾರಾಯಣ ಸಭಾಹಿತ್, ವನ್ಯಜೀವಿ ತಜ್ಞರಾದ ಡಾ. ಕೆ. ಉಲ್ಲಾಸ್ ಕಾರಂತ ಇವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಇವರು ಕಾರಂತ ಸಂಸ್ಮರಣೆಯನ್ನು ನಡೆಸಿಕೊಡಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ಅಂಬಾಶಪಥ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರು – ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಮತ್ತು ಶ್ರೀ ಸೃಜನ್ ಗಣೇಶ್ ಹೆಗಡೆ, ಮದ್ದಲೆ – ಎನ್.ಜಿ. ಹೆಗಡೆ ಯಲ್ಲಾಪುರ ಹಾಗೂ ಚಂಡೆ – ರಾಕೇಶ ಮಲ್ಯ, ಹಳ್ಳಾಡಿ ಹಾಗೂ ಮುಮ್ಮೇಳದಲ್ಲಿ : ಭೀಷ್ಮ – ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಅಂಬೆ – ಶಶಿಕಾಂತ ಶೆಟ್ಟಿ ಕಾರ್ಕಳ, ಅಂಬಿಕೆ – ಸುಬ್ರಹ್ಮಣ್ಯ ಮೊಗವೀರ, ಅಂಬಾಲಿಕೆ – ಜಯಂತ ಮಾರ್ಗೋಳಿ, ಸಾಲ್ವ – ವಿಶ್ವನಾಥ ಪೂಜಾರಿ ಹೆನ್ನಾಬೈಲು, ಪರಶುರಾಮ-ಈಶ್ವರ ನಾಯ್ಕ ಮಂಕಿ, ಬ್ರಾಹ್ಮಣ- ಹಳ್ಳಾಡಿ ಜಯರಾಮ ಶೆಟ್ಟಿ ಇವರುಗಳು ಸಹಕರಿಸಲಿದ್ದಾರೆ.