ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ನಾಲ್ಕನೆಯ ವರ್ಷದ ‘ಯಕ್ಷಗಾನ ಸಪ್ತೋತ್ಸವ -2025’ವನ್ನು ದಿನಾಂಕ 04ರಿಂದ 10 ಅಕ್ಟೋಬರ್ 2025ರಂದು ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ ಗಂಟೆ 5-15ಕ್ಕೆ ವಿದ್ವಾನ್ ಅಶೋಕ ಆಚಾರ್ ಮತ್ತು ತಂಡದವರಿಂದ ಭಕ್ತಿಗೀತೆ ಮತ್ತು ಸುಗಮ ಸಂಗೀತ ಪ್ರಸ್ತುತಗೊಳ್ಳಲಿದೆ. ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ. ಕುಂದರ್ ಇವರ ಅಧ್ಯಕ್ಷತೆಯಲ್ಲಿ ಎಡನೀರು ಮಠಾದೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಇವರು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅಜ್ಞಾತ ಕವಿ ವಿರಚಿತ ‘ಚಿತ್ರಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 05 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಶ್ರೀಮತಿ ಸುಕನ್ಯ ಸೋಮಯಾಜಿ ಮತ್ತು ಬಳಗದವರಿಂದ ‘ಭಾವ ಗೀತೆ’ ಮತ್ತು ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 06 ಅಕ್ಟೋಬರ್ 2025ರಂದು ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರರ ನೆನಪಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5-00 ಗಂಟೆಗೆ ಕೋಟದ ಛಾಯಾ ತರಂಗಿಣಿ ಸಂಗೀತ ಶಾಲೆಯವರಿಂದ ‘ನಾದ ಸಂಭ್ರಮ’, ‘ಯಕ್ಷಗಾನದ ಈಗಿನ ಬೆಳವಣಿಗೆಯ ಸಾಧಕ ಭಾದಕಗಳು’ ಎಂಬ ವಿಷಯದ ಬಗ್ಗೆ ನಾರಾಯಣ ಯಾಜಿ ಸಾಲೆಬೈಲು ಇವರಿಂದ ಉಪನ್ಯಾಸ ಹಾಗೂ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕವಿ ದೇವಿದಾಸ ವಿರಚಿತ ‘ದಕ್ಷ ಯಜ್ಞ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 07 ಅಕ್ಟೋಬರ್ 2025ರಂದು ಸಂಸ್ಥಾಪಕ ಐರೋಡಿ ಸದಾನಂದ ಹೆಬ್ಬಾರ ನೆನಪಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5-00 ಗಂಟೆಗೆ ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ಸಾಂಸ್ಕೃತಿಕ ಸಂಭ್ರಮ, ‘ಯಕ್ಷಗಾನ ಭಾರತೀಯ ಚಿಂತನ’ ಎಂಬ ವಿಷಯದ ಬಗ್ಗೆ ಡಾ. ಪ್ರಭಾಕರ ಜೋಷಿ ಇವರಿಂದ ಉಪನ್ಯಾಸ ಹಾಗೂ ಸಂಸ್ಮರಣೆ ಮತ್ತು ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕವಿ ಹೊಸ್ತೋಟ ಮಂಜುನಾಥ ಬಾಗವತ್ ವಿರಚಿತ ‘ಜ್ವಾಲಾ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 08 ಅಕ್ಟೋಬರ್ 2025ರಂದು ಭಾಗವತ ಶ್ರೇಷ್ಟ ಬಿ.ಆರ್. ಕಾಳಿಂಗ ನಾವಡ ನೆನಪಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5-00 ಗಂಟೆಗೆ ಕೋಟದ ಪಂಚವರ್ಣ ಕಲಾತಂಡದವರಿಂದ ಸಾಂಸ್ಕೃತಿಕ ಸಂಭ್ರಮ ಹಾಗೂ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಮೈರ್ಪಾಡಿ ವೆಂಕಟರಮಣಯ್ಯ ವಿರಚಿತ ‘ಅಭಿಮನ್ಯೂ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 09 ಅಕ್ಟೋಬರ್ 2025ರಂದು ಭಾಗವತ ರಂಗತಜ್ಞ ಸುಬ್ರಹ್ಮಣ್ಯ ಧಾರೇಶ್ವರ ನೆನಪಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5-00 ಗಂಟೆಗೆ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ‘ಹೂವಿನ ಕೋಲು’ ಪ್ರದರ್ಶನ, ‘ಯಕ್ಷಗಾನದ ಸಭಾಲಕ್ಷಣದ ಹಿನ್ನಲೆ’ ಎಂಬ ವಿಷಯದ ಬಗ್ಗೆ ಸದಾನಂದ ಐತಾಳ ಇವರಿಂದ ಉಪನ್ಯಾಸ ಹಾಗೂ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕವಿ ರತ್ನಪುರದ ರಾಮ ವಿರಚಿತ ‘ತಾಮ್ರ ಧ್ವಜ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 10 ಅಕ್ಟೋಬರ್ 2025ರಂದು ‘ಯಕ್ಷಗಾನ ಸಪ್ತೋತ್ಸವ’ದ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 5-00 ಗಂಟೆಗೆ ಅಚ್ಚುತ ಪೂಜಾರಿ ಮತ್ತು ಚಂದ್ರಕಾಂತ ನಾಯರಿ ಇವರಿಂದ ಸುಗಮ ಸಂಗೀತ, ‘ಯಕ್ಷಗಾನದ ಅರ್ಥಗಾರಿಕೆಯ ಮಹತ್ವ’ ಎಂಬ ವಿಷಯದ ಬಗ್ಗೆ ಲಕ್ಷ್ಮಿ ಮಚ್ಚಿನ ಇವರಿಂದ ಉಪನ್ಯಾಸ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಮೈರ್ಪಾಡಿ ವೆಂಕಟರಮಣಯ್ಯ ವಿರಚಿತ ‘ಭಕ್ತ ಪ್ರಹ್ಲಾದ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.