ಎಡನೀರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಎಡನೀರು ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀ ಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಶ್ರೀಮಠದಲ್ಲಿ ತಾಳಮದ್ದಳೆ ‘ಭಕ್ತ ಮಯೂರಧ್ವಜ’ ಎಂಬ ಆಖ್ಯಾನದೊಂದಿಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಫುಲ್ಲಚಂದ್ರ ನೆಲ್ಯಾಡಿ, ಗಿರೀಶ್ ಮುಳಿಯಾಲ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಲಕ್ಷ್ಮೀಶ ಬೇಂದ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಮಯೂರಧ್ವಜ), ಗುಡ್ಡಪ್ಪ ಬಲ್ಯ (ತಾಮ್ರ ಧ್ವಜ), ರಾಜೇಂದ್ರ ಕಲ್ಲೂರಾಯ (ನಕುಲಧ್ವಜ), ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ಸುಬ್ಬಪ್ಪ ಕೈಕಂಬ (ಅರ್ಜುನ), ಅಚ್ಯುತ ಪಾಂಗಣ್ಣಾಯ (ಕುಮುದ್ವತಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಪೂಜ್ಯ ಶ್ರೀಗಳು ಕಲಾವಿದರಿಗೆ ಮಂತ್ರಾಕ್ಷತೆಯನ್ನು ಇತ್ತು ಹರಸಿದರು.