ಕಾಸರಗೋಡು : ಕೀರಿಕ್ಕಾಡು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಿರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಡಾ. ರಮಾನಂದ ಬನಾರಿ ಅವರ ಹಿರಿತನದಲ್ಲಿ ‘ಅಗ್ರ ಪೂಜೆ’ ಯಕ್ಷಗಾನ ತಾಳಮದ್ದಳೆಯು ದಿನಾಂಕ 27-01-2024ರಂದು ಜರಗಿತು. ಭಾಗವತರಾಗಿ ಮೋಹನ ಮೆಣಸಿನಕಾನ, ಚೆಂಡೆ ಮದ್ದಳೆ ವಾದನದಲ್ಲಿ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ ಬೆಳ್ಳಿಪ್ಪಾಡಿ ಸಹಕರಿಸಿದರು.
ಅರ್ಥಧಾರಿಗಳಾಗಿ ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು, ರಾಮಯ್ಯ ರೈ ಕಲ್ಲಡ್ಕಗುತ್ತು, ರಮಾನಂದ ರೈ ದೇಲಂಪಾಡಿ, ಭಾಸ್ಕರ ಮಾಸ್ತರ್ ದೇಲಂಪಾಡಿ, ರಾಮ ನಾಯ್ಕ ಈಶ್ವರಮಂಗಲ, ರಜತ್ ಡಿ.ಆರ್., ಬಿ.ಎಚ್. ವೆಂಕಪ್ಪ, ಗೋಪಾಲಕೃಷ್ಣ ಮುದಿಯಾರು ಭಾಗವಹಿಸಿದರು. ಬಬಿತಾ ಕೋಟಿಗದ್ದೆ ಸ್ವಾಗತಿಸಿ, ನಂದಕಿಶೋರ ಬನಾರಿ ವಂದಿಸಿದರು.