ಬೆಂಗಳೂರು : ಯಕ್ಷ ಸಂಕ್ರಾಂತಿ ಬಳಗ, ಅಭಾಸಾಪ ತಾಳಮದ್ದಳೆ ಘಟಕ, ಯಕ್ಷ ಶರವಣ ಬಳಗ, ರಂಗಸ್ಥಳ ಯಕ್ಷಮಿತ್ರ ಕೂಟ, ಯಕ್ಷ ಕಲಾಸಾಗರ ಬಳಗ, ಕಲಾಕ್ಷೇತ್ರ ಯಕ್ಷಮಿತ್ರ ಬಳಗ, ಯಕ್ಷನುಡಿಸಿರಿ ಬಳಗ, ಯಕ್ಷ ಸಂಗಮ ಬಳಗ, ಟೀಮ್ ತಿತ್ತಿತೈ, ಧಾರ್ಮಿಕ್ ಸಂಸ್ಥೆ ಬಳಗ, ಯಕ್ಷ ಬ್ರಹ್ಮಶ್ರೀ, ಯಕ್ಷ ಪೌರ್ಣಿಮೆ ಬಳಗ ಇವುಗಳ ಸಂಯುಕ್ತ ಆಯೋಜನೆಯಲ್ಲಿ ‘ಭೃಗುಶಾಪ’ ಯಕ್ಷಗಾನ ತಾಳಮದ್ದಳೆಯನ್ನು ದಿನಾಂಕ 29 ನವೆಂಬರ್ 2024ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಶ್ರೀ ವಿನಯ್ ಆರ್. ಶೆಟ್ಟಿ, ಶ್ರೀ ಸಂಪತ್ ಆಚಾರ್ಯ ಮತ್ತು ಶ್ರೀ ಪನ್ನಗ ಮಯ್ಯ ಹಾಗೂ ಮುಮ್ಮೇಳದಲ್ಲಿ ಶ್ರೀ ಜಬ್ಬಾರ್ ಸಮೋ, ಶ್ರೀ ಸತೀಶ್ ಶೆಟ್ಟಿ ಮೂಡುಬಗೆ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಶ್ರೀ ಅವಿನಾಶ್ ಉಬರಡ್ಕ ಮತ್ತು ಶ್ರೀ ಸುಧಾಕರ ಜೈನ ಹೊಸಬೆಟ್ಟುಗುತ್ತು ಇವರುಗಳು ಸಹಕರಿಸಲಿರುವರು.
ಬೆಂಗಳೂರಿನಲ್ಲಿ ಯಕ್ಷಗಾನಗಳು ಹೆಚ್ಚು ಆಗುತ್ತಲೆ ಇರುತ್ತವೆ. ಆದರೆ ಪೌರಾಣಿಕ ಕಥೆಗಳ ಪೂರ್ಣಪ್ರಮಾಣದ ಅರಿವು ಮೂಡಿಸುವ ಕೂಟಗಳು ಅಂದರೆ ತಾಳಮದ್ದಳೆಗಳು ಬೆಂಗಳೂರಿನಲ್ಲಿ ವಿರಳ. ಬೆಂಗಳೂರಿನಲ್ಲಿ ಈ ವರ್ಷದ ತಿರುಗಾಟದ ಆಟಗಳ ಸಂಖ್ಯೆ ಮುಗಿದಿದೆ. ಶುದ್ಧ ಪೌರಾಣಿಕ ಆಸಕ್ತರಿಗಾಗಿ ತಾಳಮದ್ದಳೆ ಉಣಬಡಿಸುವ ಪ್ರಯತ್ನ ಇದಾಗಿದ್ದು, ಉಚಿತ ಪ್ರವೇಶ, ಯಾವುದೇ ಟಿಕೇಟ್ ಇಲ್ಲ.