ಪುತ್ತೂರು : ಪುತ್ತೂರಿನ ದರ್ಬೆ ವಿದ್ಯಾನಗರದಲ್ಲಿರುವ ಬಹುವಚನಂ ಇದರ ವತಿಯಿಂದ ವಾಗರ್ಥ ಯಕ್ಷ ಬಳಗ ಪ್ರಸ್ತುತಿಯಲ್ಲಿ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರದಲ್ಲಿ ಆಯೋಜಿಸಿಲಾಗಿದೆ.
‘ಅಂಗದ ಸಂಧಾನ’ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರು ಮುಂಡಾಳಗುತ್ತು ಪ್ರಶಾಂತ ರೈ, ಚಂಡೆಯಲ್ಲಿ ಶ್ರೀಧರ ವಿಟ್ಲ ಮತ್ತು ಮದ್ದಲೆಯಲ್ಲಿ ಬಾಲ ಸುಬ್ರಹ್ಮಣ್ಯ ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್ ಮತ್ತು ಗಣೇಶ ಶೆಟ್ಟಿ ಕನ್ನಡಿಕಟ್ಟೆ ಸಹಕರಿಸಲಿದ್ದಾರೆ.