ಬಸರೀಕಟ್ಟೆ : ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ದೇವಸ್ಥಾನದ ಸಂಪೂರ್ಣ ಸಹಕಾರದೊಂದಿಗೆ ಕಲಾಭಿಮಾನಿ ಬಳಗ ಬಸರೀಕಟ್ಟೆ ಅರ್ಪಿಸುವ ‘ಯಕ್ಷಗಾನ ತಾಳಮದ್ದಲೆ’ ಕಾರ್ಯಕ್ರಮವನ್ನು ದಿನಾಂಕ 07 ಅಕ್ಟೋಬರ್ 2025ರಂದು ಅಪರಾಹ್ನ 2-30 ಗಂಟೆಗೆ ಬಸರೀಕಟ್ಟೆ ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರಾಜಾ ಯಯಾತಿ’ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ಸುರೇಶ ಶೆಟ್ರು ಶಂಕರ ನಾರಾಯಣ ಮತ್ತು ದರ್ಶನ್ ಮುಜೆಖಾನ್, ಮೃದಂಗದಲ್ಲಿ ಗಣೇಶಮೂರ್ತಿ ಹುಲುಗಾರು, ವೆಂಕಟೇಶ ಭಾಗವತರಮನೆ ಮತ್ತು ಚೆಂಡೆಯಲ್ಲಿ ರಾಧಾಕೃಷ್ಣ ಕುಂಜತ್ತಾಯ ಹಾಗೂ ಮುಮ್ಮೇಳದಲ್ಲಿ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಹರೀಶ ಬಳಂತಿಮೊಗರು, ಜನಾರ್ದನ ಮಂಡಗಾರು, ಅರವಿಂದ ಹಳ್ಳದಾಚೆ, ಸುನಿಲ್ ಹೊಲಾಡು ಸಹಕರಿಸಲಿದ್ದಾರೆ.