ಬೆಂಗಳೂರು : ಶ್ರೀ ಪೇಜಾವರ ಮಠ ವಿದ್ಯಾಪೀಠ ಬೆಂಗಳೂರು ಆಯೋಜನೆಯಲ್ಲಿ ನೀರ್ಮಾಣ್ ಯಕ್ಷಬಳಗ (ರಿ.) ಅರ್ಪಿಸುವ ತಿಂಗಳ ತಿರುಳು ಸರಣಿಯ 37ನೇ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ದಿನಾಂಕ 15 ನವೆಂಬರ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರು ವಿದ್ಯಾಪೀಠದ ಶ್ರೀ ಪೇಜಾವರ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಕವಿ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ ‘ಗೋವರ್ಧನ ಗಿರಿಪೂಜೆ’ ಯಕ್ಷಗಾನ ತಾಳಮದ್ದಲೆಯ ಹಿಮ್ಮೇಳದಲ್ಲಿ ಬಾಲಕೃಷ್ಣ ಹಿಳ್ಳೋಡಿ ಭಾಗವತರು, ಚಿನ್ಮಯ ಅಂಬಾರಗೊಡ್ಲು ಮದ್ದಲೆ ಮತ್ತು ಮಿತ್ರ ಮಧ್ಯಸ್ಥ ಚೆಂಡೆಯಲ್ಲಿ ಹಾಗೂ ಮುಮ್ಮೇಳದಲ್ಲಿ ರವಿ ಐತುಮನೆ, ಚಂದನ್ ಕಲಾಹಂಸ, ಸಮರ್ಥ ಬೆಂಕಟವಳ್ಳಿ, ಕುಮಾರಿ ಸಿರಿ ಹಳ್ಳದಾಚೆ, ರಾಘವೇಂದ್ರ ಹೆಗಡೆ ವಾಜಗೋಡು ಮತ್ತು ಮನೋಜ್ ಭಟ್ ಏಳಗದ್ದೆ ಸಹಕರಿಸಲಿದ್ದಾರೆ.

