ಬೆಂಗಳೂರು : ಮಹಾನಗರದಲ್ಲೊಂದು ಮಾತಿನ ಮಂಟಪ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 25 ಮೇ 2025ರಂದು ಮಧ್ಯಾಹ್ನ 2-30 ಗಂಟೆಗೆ ದಿಗ್ಗಜ ಕಲಾವಿದರಿಂದ ‘ತಾಳಮದ್ದಳೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಕರ್ಮಬಂಧ’ ಎಂಬ ಪ್ರಸಂಗದಲ್ಲಿ ಜಬ್ಬಾರ್ ಸಮೋ ಸಂಪಾಜೆ – ಕೌರವ, ವಾಸುದೇವ ರಂಗಾಭಟ್ ಮಧೂರು – ಭೀಷ್ಮ 1, ರಾಧಾಕೃಷ್ಣ ಕಲ್ಚಾರ್ – ಭೀಷ್ಮ 2 ಮತ್ತು ಹರೀಶ್ ಬೋಳಂತಿಮೊಗೆರು – ಕೃಷ್ಣನಾಗಿ ಹಾಗೂ ಗೇರುಸೊಪ್ಪೆ ಶಾಂತಪ್ಪಯ್ಯ ವಿರಚಿತ ‘ಶಲ್ಯ ಸಾರಥ್ಯ’ ಎಂಬ ಪ್ರಸಂಗದಲ್ಲಿ ಕೌರವನಾಗಿ ಸಂಕದಗುಂಡಿ ಗಣಪತಿ ಭಟ್, ಶಲ್ಯನಾಗಿ ಪವನ ಕಿರಣಕೆರೆ ಹಾಗೂ ಕರ್ಣನಾಗಿ ಅವಿನಾಶ ಶೆಟ್ಟಿ ಉಬರಡ್ಕ ಇವರುಗಳು ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ಪ್ರಸನ್ನ ಭಟ್ ಬಾಳ್ಕಲ್, ಅಕ್ಷಯ ಆಚಾರ್ಯ ಬಿದ್ಕಲ್ ಕಟ್ಟೆ, ಸಂಪತ್ ಆಚಾರ್ಯ ಮತ್ತು ಮನೋಜ್ ಆಚಾರ್ ಸಹಕರಿಸಲಿದ್ದಾರೆ.