ಧಾರವಾಡ : ಯಕ್ಷಗಾನ ಮತ್ತು ಸಂಸ್ಕೃತಿ ಸಂಘ ಧಾರವಾಡ ಇವರಿಂದ ಹನುಮ ಜಯಂತಿ ಪ್ರಯುಕ್ತ ‘ಚೂಡಾಮಣಿ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 22-04-2024ರಂದು ಸಂಜೆ ಗಂಟೆ 6-30ಕ್ಕೆ ಧಾರವಾಡದ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಮಂಜುನಾಥ ಹೆಗಡೆ ಮತ್ತು ಶ್ರೀ ನರಸಿಂಹ ಸ್ವಾಮಿ, ಮದ್ದಳೆಯಲ್ಲಿ ಶ್ರೀ ಶ್ರೀಪಾದ ಭಟ್ ಮೂಡಗಾರು ಹಾಗೂ ಚಂಡೆಯಲ್ಲಿ ಶ್ರೀ ನಾರಾಯಣ ಕೋಮಾರ್ ಮತ್ತು ಮುಮ್ಮೇಳದಲ್ಲಿ ರಾಮನಾಗಿ ಶ್ರೀ ಆನಂದ ಭಟ್, ಲಕ್ಷ್ಮಣನಾಗಿ ಶ್ರೀಮತಿ ವಾಸವಿ ಹೆಗಡೆ, ಸುಗ್ರೀವನಾಗಿ ಶ್ರೀಮತಿ ವಾಣಿಶ್ರೀ ಕೊಡ್ಲೆಕೆರೆ, ಹನುಮಂತನಾಗಿ ವಿದ್ವಾನ್ ವಿನಾಯಕ ಭಟ್ ಶೇಡಿಮನೆ, ಜಾಂಬವಂತನಾಗಿ ಶ್ರೀಮತಿ ಶಶಿಕಲಾ ಜೋಶಿ, ಸಂಪಾತಿಯಾಗಿ ಶ್ರೀ ಪ್ರಕಾಶ ಸಂಣಿಗಮ್ಯನವರ್, ರಾವಣನಾಗಿ ಶ್ರೀ ಎಸ್.ಆರ್. ಹೆಗಡೆ, ಸೀತೆಯಾಗಿ ಶ್ರೀ ವಿ.ಜಿ. ಭಟ್, ಸರಮೆಯಾಗಿ ಶ್ರೀ ಅಭಿನಂದನ, ಲಂಕಿಣಿಯಾಗಿ ಶ್ರೀ ಮಂಜುನಾಥ್ ಭಟ್ ಹೆಬ್ರೆ, ತ್ರಣಬಿಂದುವಾಗಿ ಶ್ರೀ ಸುರೇಶ್ ಭಟ್ ಧಾರವಾಡ ಇವರುಗಳು ಸಹಕರಿಸಲಿದ್ದಾರೆ.