ಬೆಂಗಳೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರ ವತಿಯಿಂದ ಬೆಂಗಳೂರು ಮಹಾನಗರದಲ್ಲಿ ಕಲಾಪೋಷಕರ ಸಹಯೋಗದಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ವನ್ನು ದಿನಾಂಕ 08ರಿಂದ 14 ಅಕ್ಟೋಬರ್ 2025ರವೆರೆಗೆ ಹಮ್ಮಿಕೊಳ್ಳಲಾಗಿದೆ.
ದಿನಾಂಕ 08 ಅಕ್ಟೋಬರ್ 2025ರಂದು ಸಂಜೆ 3-30 ಗಂಟೆಗೆ ವಿಜಯನಗರದ ಗಾನಸೌರಭ ಯಕ್ಷಗಾನ ಶಾಲೆಯಲ್ಲಿ ‘ಕೃಷ್ಣ ಸಂಧಾನ’, ದಿನಾಂಕ 09 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಸಂಜಯ ನಗರದಲ್ಲಿರುವ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಅನುಗ್ರಹ ಕೇಂದ್ರದಲ್ಲಿ ‘ಕರ್ಣ ಬೇಧನ’, ದಿನಾಂಕ 10 ಅಕ್ಟೋಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು ಕೆ.ಆರ್. ಪುರಂನ ಎಸ್.ಜೆ.ಇ.ಎಸ್. ಕಾಲೇಜಿನಲ್ಲಿ ‘ವಾಲಿ ವಧೆ’ ಹಾಗೂ ಸಂಜೆ 5-00 ಗಂಟೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಕ್ಷಯ ನಗರದಲ್ಲಿ ‘ಸುಧನ್ವ ಮೋಕ್ಷ’, ದಿನಾಂಕ 11 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ರಾಜಾಜಿನಗರದ ಚಿತ್ಪಾವನ ಸುವರ್ಣ ಭವನದಲ್ಲಿ ‘ಬಲರಾಮ ಭಕ್ತಿ’, ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 6-00 ಗಂಟೆಗೆ ನಾಗ ಸಂದ್ರದ ಶಬರಿಗಿರಿಯಲ್ಲಿ ‘ಶಲ್ಯ ಸಾರಥ್ಯ’, ದಿನಾಂಕ 13 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ನಾಗರಬಾವಿ ಹಿಂದೂ ಧಾರ್ಮಿಕ ಸಭಾಭವನದಲ್ಲಿ ‘ಭೀಷ್ಮ ಪರ್ವ’ ಪ್ರಸಂಗದ ತಾಳಮದ್ದಲೆ ನಡೆಯಲಿದೆ.