ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ಗುರುಗಳ ಸಭೆಯು ದಿನಾಂಕ 07 ಆಗಸ್ಟ್ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ “ಈ ಬಾರಿ 94 ಪ್ರೌಢಶಾಲೆಗಳಲ್ಲಿ 41 ಗುರುಗಳಿಂದ ಯಕ್ಷಗಾನ ಕಲಿಕೆ ಆರಂಭಗೊಂಡಿದ್ದು, ನವಂಬರ್ ಕೊನೆಯ ವಾರ ಬ್ರಹ್ಮಾವರದಲ್ಲಿ ಪ್ರದರ್ಶನವನ್ನು ಆರಂಭಿಸಿ, ಬಳಿಕ ರಾಜಾಂಗಣದಲ್ಲಿ ಪ್ರದರ್ಶನ, ಅದೇ ಸಂದರ್ಭದಲ್ಲಿ ಸಮಾನಾಂತರವಾಗಿ ಕಾಪು ಕ್ಷೇತ್ರದ ಶಾಲೆಗಳ ಪ್ರದರ್ಶನವನ್ನು ಆಯೋಜಿಸೋಣ. ಆ ಬಳಿಕ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದ ಶಾಲೆಗಳ ಪ್ರದರ್ಶನಗಳನ್ನು ನಡೆಸೋಣ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಪ್ರದರ್ಶನಗಳನ್ನು ಮುಗಿಸೋಣ” ಎಂದು ನುಡಿದರು.
ಗುರುಗಳು ತಮ್ಮ ತಮ್ಮ ಶಾಲೆಯ ಯಕ್ಷಶಿಕ್ಷಣದ ಕುರಿತಾಗಿ, ಶಾಲೆಯ ಪ್ರತಿಸ್ಪಂದನೆಯ ಬಗೆಗೂ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಕೋಶಾಧಿಕಾರಿ ಗಣೇಶ್ ಬ್ರಹ್ಮವಾರ, ಟ್ರಸ್ಟಿಗಳಾದ ನಾರಾಯಣ ಎಂ. ಹೆಗಡೆ, ವಿ.ಜಿ. ಶೆಟ್ಟಿ, ವಿದ್ಯಾಪ್ರಸಾದ್, ನಟರಾಜ ಉಪಾಧ್ಯಾಯ, ನಾಗರಾಜ ಹೆಗಡೆ ಹಾಗೂ ಗುರುಗಳು ಪಾಲ್ಗೊಂಡು ವಿಚಾರ ವಿನಿಮಯ ನಡೆಸಿದರು.