ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ-ತೆಕ್ಕಟ್ಟೆ ಮತ್ತು ಧಮನಿ ಟ್ರಸ್ಟ್ ದಿಮ್ಸಾಲ್ ತಂಡದ ಸಹಯೋಗದೊಂದಿಗೆ ತೆಕ್ಕಟ್ಟೆಯಲ್ಲಿ ದಿನಾಂಕ 08-04-2024ರಂದು ಯಕ್ಷ-ಗಾನ-ವೈಭವ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇದಮೂರ್ತಿ ಲೋಹಿತಾಶ್ವ ಆಚಾರ್ಯರವರು ಮಾತನಾಡಿ “ಗಂಡು ಕಲೆಯಾದ ಯಕ್ಷಗಾನದಿಂದ ಜ್ಞಾನ ಸಂಪಾದನೆ ಸಾಧ್ಯ. ಕಲಾವಿದರೇ ಆಗಿ ರಂಗದಲ್ಲಿ ರಂಜಿಸಿದ ಕಲಾಸಕ್ತ ವಿಶ್ವನಾಥ ಆಚಾರ್ಯ ಪಾತ್ರ ಪೋಷಣೆಯಲ್ಲಿ ನಿಪುಣರು. ಕಲಾರಾಧಕರಾಗಿ ಸ್ಥಳೀಯ ಸಂಸ್ಥೆಗೆ ತನ್ನ ಮನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಲೇಪನ ತೊಡಿಸಿ ಕಾರ್ಯಕ್ರಮವನ್ನು ಪರಿಪೂರ್ಣವಾಗಿಸಿಕೊಂಡರು” ಎಂದು ಹೇಳಿ ಸ್ವರ್ಣಶ್ರೀ ಪುನೀತ್ ಕುಮಾರ್ ಆಚಾರ್ಯರನ್ನು ಯಶಸ್ವೀ ಕಲಾವೃಂದದ ಪರವಾಗಿ ಅಭಿನಂದಿಸಿದರು.
ರಥದ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಉದ್ಯಮಿ ಗೋಪಾಲ ಪೂಜಾರಿ, ವಿಶ್ವನಾಥ ಆಚಾರ್ಯ ಕುಟುಂಬದವರು ಗೌರವ ಸಮರ್ಪಣೆಯಲ್ಲಿ ಉಪಸ್ಥಿತರಿದ್ದರು. ಗುರುಗಳಾದ ಲಂಬೋದರ ಹೆಗಡೆ ಸ್ವಾಗತಿಸಿ ನಿರೂಪಣೆಗೈದರು. ಬಳಿಕ ಯಕ್ಷ ಗಾನ ವೈಭವ ಯಶಸ್ವೀ ಕಲಾವೃಂದದ ಸಂಯೋಜನೆಯಲ್ಲಿ ಪ್ರಸ್ತುತಿಗೊಂಡಿತು.